Kannada NewsKarnataka NewsLatestPolitics

ಈಶ್ವರಪ್ಪ ವಿರುದ್ಧ ಗರಂ ಆದ ಶಿವರಾಮ ಹೆಬ್ಬಾರ್

ಪ್ರಗತಿವಾಹಿನಿ ಸುದ್ದಿ, ಶಿರಸಿ: ಈಶ್ವರಪ್ಪ‌ ಯಾರಿಂದ‌ ಮಂತ್ರಿಯಾದ್ರು, ಯಾರಿಂದ ಮಂತ್ರಿಪದವಿ ಕಳೆದುಕೊಂಡ್ರು ಎಂಬುದು ಅವರೇ ಕಂಡುಕೊಳ್ಳಲಿ ಎಂದು ಶಾಸಕ ಶಿವರಾಮ್ ಹೆಬ್ಬಾರ್‌ ಬಹಿರಂಗ ಕಿಡಿ ಕಾರಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಸ್ಫೋಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಾಯಕರು ಪರಸ್ಪರ ಕೆಸರೆರಚಿಕೊಂಡು ತೀವ್ರ ಮುಜುಗರಕ್ಕೆ ಈಡು ಮಾಡುತ್ತಿದ್ದಾರೆ. ಬಿಜೆಪಿ‌ ಹಿರಿಯ ನಾಯಕ ಕೆ. ಎಸ್.ಈಶ್ವರಪ್ಪ ಅವರ ಸಮಯ ಸಂದರ್ಭ ಬಂದಾಗ ವರಿಷ್ಠರು ಬಾಲ ಕಟ್ ಮಾಡುತ್ತಾರೆ‌ ಎಂಬ ಹೇಳಿಕೆ ಕುರಿತು ಮಾಜಿ ಸಚಿವ,‌ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಶುಕ್ರವಾರ ಬಹಿರಂಗ ಆಕ್ರೋಶ ಹೊರ ಹಾಕಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಬ್ಬಾರ್, ಜುಲೈ 3 ರಂದು ಬೆಂಗಳೂರಿನಲ್ಲಿ ನಾವೆಲ್ಲ ಸಭೆ ಸೇರುತ್ತಿದ್ದೇವೆ. ಸೂಕ್ತ ಪ್ರತಿಕ್ರಿಯೆ ನೀಡುತ್ತೇವೆ. ಆದರೆ, ಬಾಲ‌ ಕಟ್ ಮಾಡುವ ಕೆಲಸ ಎಂದೂ ಮಾಡಿಲ್ಲ‌. ಈಶ್ವರಪ್ಪ ಅವರು‌‌ ಬಿಜೆಪಿ ವರಿಷ್ಠರು ಮುಂಬೈ ಟೀಂ ನ ಬಾಲ ಕಟ್ ಮಾಡುತ್ತಾರೆ ಎಂದಿದ್ದಾರೆ. ಈಶ್ವರ‌ಪ್ಪ ಅವರು ಹೇಳಿಕೆ ನೀಡಿ‌ ಮರುದಿ‌ನ ವಾಪಸ್ ಪಡೆದಿದ್ದಾರೆ. ಯಾಕೆ ವಾಪಸ್ ತೆಗೆದುಕೊಂಡರು ಎಂದು ಕೇಳುವುದಿಲ್ಲ. ಕೆಲವರಿಗೆ ಮಾತನಾಡುವ ಚಟ. ಅವರಿಗೆ ಟಿಕೆಟ್ ತಪ್ಪಿದ್ದು ಹೇಗೆ? ಯಾಕೆ? ಸಚಿವ ಸ್ಥಾನ ಯಾಕೆ ಕಳೆದುಕೊಂಡರು ಎಂದು ಕೇಳುವುದಿಲ್ಲ ಎಂದು ತಿರುಗೇಟು ನೀಡಿದರು.

ಸರಕಾರ ಬರಲು ನಾವೇ ಕಾರಣ. ಶಾಸಕನಾಗಿ‌ 13 ತಿಂಗಳಿಗೆ ರಾಜೀನಾಮೆ ನೀಡಿದ್ದೆವು.‌ ಜವಾಬ್ದಾರಿ‌ ಉಳ್ಳ ಜನರು ಶಬ್ಧ ಬಳಸುವಾಗ ಎಚ್ಚರಿಕೆ ವಹಿಸಬೇಕು. ನಾವು ಯಾವುದೇ‌ ಕಾರಣಕ್ಕೂ ಅವರ‌ ಮಾತನ್ನು ಒಪ್ಪಿಕೊಳ್ಳುವುದಿಲ್ಲ. ನಾವು‌ ನಡೆದುಬಂದ‌‌‌ ಹಾದಿ ಹಾಗೂ‌ ನಡೆಯುವ ಹಾದಿ ಎರಡರ‌ ಬಗ್ಗೆಯೂ ನಮಗೆ‌‌ ಸ್ಪಷ್ಟತೆ ಇದೆ‌ ಎಂದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button