
ಪ್ರಗತಿವಾಹಿನಿ ಸುದ್ದಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಪ್ರಸಿದ್ಧ ಸೋಮೇಶ್ವರ ದೇವಾಲಯದಲ್ಲಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ದೇವಸ್ಥಾನದ ಗರ್ಭಗುಡಿ ಒಳಗಿರುವ ಶಿವಲಿಂಗದ ಮೇಲೆ ಬಳಪದಿಂದ ಬರೆದು ಹುಚ್ಚಾಟ ಮೆರೆದಿದ್ದಾರೆ.
ಶಿರಸಿ ತಾಲೂಕಿನ ನರಬೈಲ್ ನಲ್ಲಿರುವ ಸೋಮೇಶ್ವರ ದೇವಾಲಯದಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಅರ್ಚಕರು ಬಂದು ಗರ್ಭಗುಡಿಯ ಬಾಗಿಲು ತೆರೆದಾಗ ಶಿವಲಿಂಗದ ಮೇಲೆ ಇಂಗ್ಕೀಷ್ ಅಕ್ಷರಗಳಿಂದ ಚಾಕ್ ಪೀಸ್ ನಲ್ಲಿ ಬರೆದಿರುವುದು ಪತ್ತೆಯಾಗಿದೆ.
ಜೆಇಎಸ್ 2024, 2026 ಎಂದು ಶಿವಲಿಂಗದ ಮೇಲೆ ಬರೆಯಲಾಗಿದೆ. ಇದು ಹಲವು ಅನುಮಾನಕ್ಕೆ ಕಾರಣವಗಿದೆ. ವಿಷಯ ತಿಳಿಯುತ್ತಿದ್ದಂತೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
 
					 
				 
					 
					 
					 
					
 
					 
					 
					


