
ಪ್ರಗತಿವಾಹಿನಿ ಸುದ್ದಿ: ಸಣ್ಣ ಸಣ್ಣ ವಿಷಯಕ್ಕೂ ಅತ್ತೆಯೊಂದಿಗೆ ಜಗಳವಾಡುತ್ತಿದ್ದ ಅಳಿಯ ಅತ್ತೆಯನ್ನೇ ಹತ್ಯೆಗೈದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದೊಡ್ನಳ್ಳಿಯಲ್ಲಿ ನಡೆದಿದೆ.
ಒಕ್ಕಲಕೊಪ್ಪದ ಬಸವರಾಜ್ ಮುಟ್ಟಪ್ಪ (42) ನನ್ನು ಪೊಲೀಸರು ಬಂಧಿಸಿದ್ದಾರೆ. ಕಮಲಾ ನಾಯ್ಕ್ (70) ಅಳಿಯ ಬಸವರಾಜ್ ನಿಂದ ಕೊಲೆಯಾದ ಮಹಿಳೆ. ಕ್ಷುಲ್ಲಕ ಕಾರಣಕ್ಕೆ ಅತ್ತೆ-ಅಳಿಯನ ನಡುವೆ ಜಗಳವಾಗಿ ಕೋಪದಲ್ಲಿ ಹರಿತವಾದ ಆಯುಧದಿಂದ ಹೊಡೆದು ಅತ್ತೆಯನ್ನೇ ಹತ್ಯೆ ಮಾಡಿದ್ದಾನೆ.
ಪತಿ ವಿರುದ್ಧ ಬಸಬ್ವರಾಜ್ ಪತ್ನಿ ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದರು. ಪತ್ನಿ ದೂರು ಆಧರಿಸಿ ಪೊಲೀಸರು ಬಸವರಾಜ್ ನನ್ನು ಬಂಧಿಸಿದ್ದಾರೆ.