Belagavi NewsBelgaum NewsKannada NewsLatest

*ಮಗನ ಅನಾರೋಗ್ಯ; ನವಿಲುತೀರ್ಥ ಜಲಾಶಯಕ್ಕೆ ಹಾರಿ ತಾಯಿ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಗನ ಅನಾರೋಗ್ಯದಿಂದ ಮನನೊಂದ ತಾಯಿ ನವಿಲುತೀರ್ಥ ಜಲಾಶಯದ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಧಾರವಾಡದ ಸಪ್ತಾಪುರ ನಿವಾಸಿ ಪ್ರಿಯದರ್ಶಿನಿ ಲಿಂಗರಾಜ್ ಪಾಟೀಲ್ (40) ಆತ್ಮಹತ್ಯೆ ಮಾಡಿಕೊಂಡವರು. ಪ್ರಿಯದರ್ಶಿನಿ ಪತಿ ಲಿಂಗರಾಜ್ ಆಸ್ಟ್ರೇಲಿಯಾದಲ್ಲಿ ಇಂಜಿನಿಯರ್ ಆಗಿದ್ದಾರೆ. ಮಗ ಅಮರ್ಥ್ಯನಿಗೆ ಅನಾರೋಗ್ಯ ಕಾರಣಕ್ಕೆ ಆರೈಕೆ ಮಾಡಲು ತಾಯಿ ಪ್ರಿಯದರ್ಶಿನಿ ಬಂದಿದ್ದರು.

ಮಗನ ಅನಾರೋಗ್ಯದಿಂದ ತೀವ್ರ ಚಿಂತಿತರಾಗಿದ್ದ ಪ್ರಿಯದರ್ಶಿನಿ ನವಿಲುತೀರ್ಥ ಜಲಾಶಯದ ಹಿನ್ನಿರೀಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದಿದೆ. ಸವದತ್ತಿ ಠಾಣೆಯಲ್ಲಿ ಪ್ರಿಯದರ್ಶಿನಿ ತಂದೆ ಸುಬರಾಯ ದೇಸಾಯಿ ಆತ್ಮಹತ್ಯೆ ಎಂದು ಕೇಸ್ ದಾಖಲಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button