
ಪ್ರಗತಿವಾಹಿನಿ ಸುದ್ದಿ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದೆ. ಮಗನೇ ತಂದೆ, ತಾಯಿ ಹಾಗೂ ಸಹೋದರಿ ಮೂವರನ್ನು ಬರ್ಬರವಾಗಿ ಕೊಲೆಗೈದು ಹೂತು ಹಾಅಕಿರುವ ಘಟನೆ ನಡೆದಿದೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ. ತಂದೆ, ತಾಯಿ ಹಾಗೂ ಸಹೋದರಿಯನ್ನು ಕೊಲೆಗೈದು ಬಳಿಕ ಮಗ ಬೆಗಳೂರಿಗೆ ಪರಾರಿಯಾಗಿದಾನೆ.
ಬೆಂಗಳೂರಿಗೆ ಬಂದ ಆರೋಪಿ, ತಿಲಕನಗರ ಠಾಣೆಯಲ್ಲಿ ತನ್ನ ತಂದೆ, ತಾಯಿ, ಸಹೋದರಿ ಮೂವರು ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದಾನೆ. ಪೊಲೀಸರು ಆತನನ್ನು ವಿಚಾರಿಸಿದಾಗ ಒಮ್ಮೆ ತಾನೇ ಮೂವರನ್ನು ಕೊಲೆಗೈದಿರುವುದಾಗಿ ಹೇಳಿದ್ದಾನೆ. ಬಳಿಕ ಇಲ್ಲಾ ಅವರು ಕಾಣುತ್ತಿಲ್ಲ ಎಂದಿದ್ದಾನೆ.
ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ತಾನೇ ತಂದೆ, ತಾಯಿ, ಸಹೋದರಿ ಮೂವರನ್ನೂ ಕೊಲೆಗೈದು, ಹೂತು ಹಾಕಿದ್ದಾಗಿ ಒಮ್ಮೆ ಹೇಳಿಕೆ ನೀಡಿದರೆ ಮತ್ತೊಮ್ಮೆ ಸಂಡೂರಿನಲ್ಲಿ ಶವಗಳನ್ನು ಎಸೆದಿದ್ದಾಗಿ ಹೇಳಿದ್ದಾನೆ. ವ್ಯಕ್ತಿ ಅಸ್ಪಷ್ಟವಾಗಿ ಹೇಳಿಕೆ ಕೊಡುತ್ತಿದ್ದು, ಈ ಬಗ್ಗೆ ತಿಲಕನಗರ ಠಾಣೆ ಪೊಲೀಸರು ಕೊಟ್ಟೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಟ್ಟೂರು ಪೊಲೀಸರು ಶವಗಳಿಗಾಗಿ ಹುಡುಕಾಟ ನಡೆಸಿದ್ದಾರೆ.



