
ಪ್ರಗತಿವಾಹಿನಿ ಸುದ್ದಿ: ಕ್ಷುಲ್ಲಕ ಕಾರಣಕ್ಕೆ ಮಗನೊಬ್ಬ ಹೆತ್ತ ತಾಯಿಯನ್ನೇ ಕೊಲೆಗೈದಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಂಚಾವರಂನಲ್ಲಿ ನಡೆದಿದೆ.
ಶೋಭಾ ಮೃತ ಮಹಿಳೆ. ಅನಿಲ್ ತಾಯಿಯನ್ನೇ ಕೊಲೆಗೈದಿರುವ ಆರೋಪಿ ಮಗ. ಕುಡಿದು ಬಂದು ತಾಯಿ ಜೊತೆ ಜಗಳವಾಡಿದ್ದ ಅನಿಲ್, ತನಗೆ ಯಾಕೆ ಇನ್ನೂ ಮದುವೆ ಮಡಿಸಿಲ್ಲ ಎಂದು ಪ್ರಶ್ನಿಸಿದ್ದಾನೆ. ತಾಯಿ ಹಾಗೂ ಮಗನ ನಡುವೆ ಮಾತಿನ ಚಕಮಕಿ ನಡೆದಿದೆ.
ಕೋಪದ ಬರದಲ್ಲಿ ಮಗ ಅನಿಲ್ ಮನೆಯಲ್ಲಿದ್ದ ಇಟ್ಟಿಗೆಯಿಂದ ತಾಯಿಯನ್ನು ಹೊಡೆದು ಕೊಂದಿದ್ದಾನೆ. ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ