
ಪ್ರಗತಿವಾಹಿನಿ ಸುದ್ದಿ: ಮಗನೊಬ್ಬ ಹೆತ್ತ ತಾಯಿಯನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡ ಜಿಲ್ಲೆಯ ಹೊಸಯಲ್ಲಾಪುರ ಬಡಾವಣೆಯಲ್ಲಿ ನಡೆದಿದೆ.
ಶಾರದಾ (60) ಮಗನಿಂದ ಕೊಲೆಯಾಗಿರುವ ತಾಯಿ. ರಾಜೇಶ (40) ತಾಯಿಯನ್ನೇ ಹತ್ಯೆಗೈದ ಮಗ.
ತಾಯಿ ಶಾರದಾ ಅವರ ಪಿಂಚಣಿ ಹಣ ಹಾಗೂ ಖಾಲಿ ಸೈಟ್ ತನ್ನ ಹೆಸರಿಗೆ ಮಾಡಿಕೊಡುವಂತೆ ಮಗ ರಾಜೇಶ್ ಪೀಡಿಸುತ್ತಿದ್ದ. ತಾಯಿ ಶಾರದಾ 19 ಸಾವಿರ ರೂಪಾಯಿ ಪಿಂಚಣಿ ಪಡೆಯುತ್ತಿದ್ದರಂತೆ. ಇದೇ ವಿಚಾರವಾಗಿ ಮಗ ಹಾಗೂ ತಾಯಿ ನಡುವೆ ಜಗಳ ಆರಂಭವಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಮಗ ತಾಯಿಯನ್ನೇ ಹತ್ಯೆ ಮಾಡಿದ್ದಾನೆ.
ಕೃತ್ಯದ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಧಾರವಾಡ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ