
ಜಗಮಗಿಸುತ್ತಿದೆ ಖಾನಾಪುರ ಪಟ್ಟಣ
ಪಟ್ಟಣ ಪಂಚಾಯಿತಿ ಸದಸ್ಯರೊಂದಿಗೆ ಇಂದು ರಾತ್ರಿ ಖಾನಾಪುರದ ಬೀದಿ ದೀಪಗಳನ್ನು ಚಾಲನೆಗೊಳಿಸಿದರು ಅಂಜಲಿ ನಿಂಬಾಳಕರ್.
ಪ್ರವಾಹದಿಂದಾಗಿ ಅಸ್ತವ್ಯಸ್ತವಾಗಿದ್ದ ತಾಲೂಕಿನ ಶೇ.95ರಷ್ಟು ಪ್ರದೇಶಗಳಲ್ಲಿ ವಿದ್ಯುತ್ ಪುನರ್ ಚಾಲನೆಗೊಳಿಸಲಾಗಿದೆ ಎಂದು ಅಂಜಲಿ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ತಾಲೂಕಿನ ಅತ್ಯಂತ ಕುಗ್ರಾಮಗಳಲ್ಲೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ತಹಸಿಲ್ದಾರ್, ಅರಣ್ಯ ಇಲಾಖೆಯ ಅಧಿಕಾರಿಗಳು ಇದಕ್ಕೆಲ್ಲ ಸಹಕಾರ ನೀಡಿದ್ದಾರೆ ಎಂದು ಶಾಸಕಿ ನಿಂಬಾಳಕರ್ ತಿಳಿಸಿದರು.
https://youtu.be/3Kkeay4Z9x8
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ