*ಸೌಜನ್ಯಾ ಪ್ರಕರಣ*: *ಕೊನೆಯಬಾರಿ ಆಕೆಯನ್ನು ನೋಡಿದ ಐವರ ವಿಚಾರಣೆ ನಡೆಸಿದ SIT*

ಪ್ರಗತಿವಾಹಿನಿ ಸುದ್ದಿ: ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ) ತನಿಖೆ ಚುರುಕುಗೊಳಿಸಿದೆ.
ಇಂದು ಎಸ್ಐಟಿ ಕಚೇರಿಯಲ್ಲಿ ಮರುತನಿಖೆಯ ಭಾಗವಾಗಿ, ಸೌಜನ್ಯಾಳನ್ನು ಕೊನೆಯದಾಗಿ ನೋಡಿದ ಐವರು ಪ್ರಮುಖ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಸೌಜನ್ಯಾ ಮಾವ ವಿಠಲ ಗೌಡ, ಸಾಕ್ಷಿಗಳಾದ ಕೃಷ್ಣಪ್ಪ, ಪುರಂದರ ಗೌಡ, ಯಶೋಧ ಮತ್ತು ಅವರ ಪುತ್ರ ಪ್ರತೀಕ್ ಅವರನ್ನು ಎಸ್ಐಟಿ ವಿಚಾರಣೆ ನಡೆಸುತ್ತಿದೆ. ಈ ಐವರ ಹೇಳಿಕೆಗಳನ್ನು ಎಸ್ಐಟಿ ತಂಡವು ದಾಖಲಿಸಿಕೊಳ್ಳುತ್ತಿದೆ. ಎಸ್ಐಟಿ ಕಚೇರಿಗೆ ತನಿಖಾಧಿಕಾರಿ ಲೋಕೇಶ್ ಮತ್ತು ಸಹ ತನಿಖಾಧಿಕಾರಿ ಮನೋಜ್ ನಾಯಕ್ ಅವರು ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ.
ಮರುತನಿಖೆಗೆ ಆದೇಶ ಸಿಕ್ಕ ಬೆನ್ನಲ್ಲೇ ಎಸ್ಐಟಿ ತಂಡವು ಹಲವು ಮಹತ್ವದ ಬೆಳವಣಿಗೆಗಳನ್ನು ಕೈಗೊಂಡಿದೆ. ಈ ಹಿಂದಿನ ತನಿಖಾ ಸಂಸ್ಥೆಗಳಿಂದಲೂ ಕೂಡ ದಾಖಲೆಗಳನ್ನು ಮತ್ತು ಮಾಹಿತಿಯನ್ನು ಎಸ್ಐಟಿ ತಂಡ ಸಂಗ್ರಹಿಸಿದೆ.
ಸೌಜನ್ಯಾ ಹತ್ಯೆಯಾದ ಸ್ಥಳ ಮತ್ತು ಆಕೆಯ ಮೃತದೇಹ ಸಿಕ್ಕ ಸ್ಥಳದಲ್ಲಿ ಮಹಜರು ಕೂಡ ನಡೆಸಲಾಗಿತ್ತು. ಪ್ರಸ್ತುತ, ಪ್ರಕರಣದ ತನಿಖೆ ಮಹತ್ವದ ಹಂತ ತಲುಪಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



