Politics

*ಹೈ ಕೋರ್ಟ್ ನಲ್ಲಿ ನಾಗೇಂದ್ರಗೆ ಸದ್ಯಕ್ಕೆ ರಿಲೀಫ್*

ಪ್ರಗತಿವಾಹಿನಿ ಸುದ್ದಿ : ಅಕ್ರಮ ಕಬ್ಬಿಣದ ಅದಿರು ಮಾರಾಟ ಸಂಬಂಧದ ಆರೋಪದಲ್ಲಿ ದಾಖಲಾಗಿರುವ 17 ಕ್ರಿಮಿನಲ್ ಪ್ರಕರಣಗಳ ರದ್ದತಿ ಕೋರಿ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನ.21ಕ್ಕೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ನಾಗೇಂದ್ರಗೆ ಸದ್ಯಕ್ಕೆ ರಿಲೀಫ್ ಸಿಕ್ಕಂತಾಗಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅನುಮತಿ ಪಡೆಯದೇ ಮತ್ತು ಸರ್ಕಾರಕ್ಕೆ ರಾಜಸ್ವ ಮತ್ತು ಇತರೆ ಶುಲ್ಕ ಪಾವತಿಸದೇ ಆರೋಪಿಗಳು 22.282 ಮೆಟ್ರಿಕ್ ಟನ್ ಕಬ್ಬಿಣದ ಅದಿರು ಮಾರಾಟ ಮಾಡಿದ್ದರು ಎಂಬ ಆರೋಪವಿದೆ.

ಈ ಪ್ರಕರಣವನ್ನು ನ್ಯಾಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠದಿಂದ ಇಂದು ವಿಚಾರಣೆ ನಡೆಸಲಾಗಿದ್ದು, ಹಿರಿಯ ವಕೀಲ ಸಂದೇಶ್ ಚೌಟ ಅವರು ನಾಗೇಂದ್ರ ಪರ ವಾದ ಮಂಡಿಸಿದರು. ವಿಶೇಷ ನ್ಯಾಯಾಲಯವು ಪ್ರಕರಣದ ಸಂಜ್ಞೆ ಪರಿಗಣಿಸಿ ಮಧ್ಯಂತರ ಆದೇಶ ವಿಸ್ತರಿಸುವ ಮೂಲಕ ಅರ್ಜಿ ವಿಚಾರಣೆ ಮುಂದೂಡಿ ಆದೇಶಿಸಿದೆ.

ಅಕ್ರಮ ಗಣಿಗಾರಿಕೆ ಮೂಲಕ ರಾಜ್ಯದ ಬೊಕ್ಕಸಕ್ಕೆ ಅಂದಾಜು 2.82 ಕೋಟಿ ರೂಪಾಯಿ ರಾಜಸ್ವ ಮತ್ತು ಇತರೆ ಶುಲ್ಕ ನಷ್ಟ ಉಂಟು ಮಾಡಿದ ಪ್ರಕರಣ ಸಂಬಂಧ ಈ ಹಿಂದೆ ನಾಗೇಂದ್ರ ಯುವಜನ ಸಬಲೀಕರಣ, ಕ್ರೀಡೆ ಮತ್ತು ಪರಿಶಿಷ್ಟರ ಕಲ್ಯಾಣ ಸಚಿವರಾಗಿದ್ದಾಗ ಹಗರಣ ನಡೆದಿದೆ ಎಂಬ ಆಪಾದನೆ ಕೇಸ್ ಇದಾಗಿದೆ. 

Home add -Advt

ಆಗ ನಾಗೇಂದ್ರ ಸೇರಿ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಒಟ್ಟು 10 ಮಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕಳೆದ ವರ್ಷ ಜೂನ್‌ನಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿ, ಸಮನ್ಸ್ ಕೂಡ ಜಾರಿ ಮಾಡಿತ್ತು.

Related Articles

Back to top button