Latest

ಎಕ್ಸ್ ಪ್ರೆಸ್ ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ; 30 ಪ್ರಯಾಣಿಕರ ಸಾವು

ಪ್ರಗತಿವಾಹಿನಿ ಸುದ್ದಿ; ಲಾಹೋರ್: ಎರಡು ಎಕ್ಸ್ ಪ್ರೆಸ್ ರೈಲುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಘೋಟ್ಕಿ ಬಳಿ ಸಂಭವಿಸಿದೆ.

ಲಾಹೋರ್ ಕಡೆ ಹೊರಟಿದ್ದ ಸರ್ ಸಯ್ಯದ್ ಎಕ್ಸ್ ಪ್ರೆಸ್ ರೈಲು ಹಾಗೂ ಸರ್ ಗೊಡಾ ಕಡೆ ತೆರಳುತ್ತಿದ್ದ ಮಿಲ್ಲತ್ ಎಕ್ಸ್ ಪ್ರೆಸ್ ರೈಲಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ದುರ್ಘಟನೆ ಯಲ್ಲಿ 30 ಪ್ರಯಾಣಿಕರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಘೋಟ್ಕಿ ಡಿಸಿ ಉಸ್ಮಾನ ಅಬ್ದುಲ್ಲಾ ಮಾಹಿತಿ ನೀಡಿದ್ದಾರೆ.

Home add -Advt

ಅಪಘಾತದ ಪರಿಣಾಮ ರೈಲುಗಳ 13 ಬೋಗಿಗಳು ಹಳಿ ತಪ್ಪಿದ್ದು 8 ಬೋಗಿಗಳು ನುಜ್ಜುಗುಜ್ಜಾಗಿವೆ. ಬೋಗಿಯ ಅವಶೇಷಗಳ ಅಡಿಯಲ್ಲಿ ಹಲವು ಪ್ರಯಾಣಿಕರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
ಬರೋಬ್ಬರಿ 250 ಲೀಟರ್ ಹಾಲನ್ನು ಚರಂಡಿಗೆ ಸುರಿದ ರೈತರು

Related Articles

Back to top button