ಪ್ರಗತಿವಾಹಿನಿ ಸುದ್ದಿ, ತೆಲಸಂಗ: ಐಗಳಿ ಠಾಣಾ ಪೋಲಿಸ್ ಪೇದೆ ಸಂಗಪ್ಪ ನಾಯಕ ವಿರುದ್ಧ ಕೊಟ್ಟಲಗಿ ಗ್ರಾಮಸ್ಥರ ದೂರಿನನ್ವಯ ಬೆಳಗಾವಿ ಜಿಲ್ಲಾ ಎಸ್.ಪಿ. ಲಕ್ಷ್ಮಣ ನಿಂಬರಗಿ ಬೆಳಗಾವಿ ಡಿಪಿಒಗೆ
ವರ್ಗಗೊಳಿಸಿ ಇಲಾಖಾ ತನಿಖೆಗೆ ಆದೇಶ ನೀಡಿದ್ದಾರೆ.
ಖಾಸಗಿ ವ್ಯಕ್ತಿಗಳೊಂದಿಗೆ ಕಾರಲ್ಲಿ ಬಂದು ಬೈಕ್ ಸೀಜ್ ಮಾಡುವುದಾಗಿ ಹೇಳಿ
ಜನರನ್ನು ಹೆದರಿಸಿ ರಸೀದೆ ನೀಡದೆ ರೈತರಿಂದ ಹಣ ವಸೂಲಿ ಮಾಡುತ್ತಿದ್ದ ಪೇದೆ ಸಂಗಪ್ಪ
ನಾಯ್ಕ ವಿರುದ್ಧ ಮೇ 22 ರಂದು ಕೊಟ್ಟಲಗಿ ಗ್ರಾಮದಲ್ಲಿ ಗ್ರಾಮಸ್ಥರು ಪೇದೆಗೆ ಘೇರಾವ್
ಹಾಕಿ ಪ್ರತಿಭಟಿಸಿದ್ದರು.
ಘಟನೆಯ ವಿಸ್ತೃತ ವರದಿಯನ್ನು ಪ್ರಗತಿ ವಾಹಿನಿ ಮೇ 23 ರಂದು ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಪೋಲಿಸ್ ಮೇಲಾಧಿಕಾರಿಗಳು ಘಟನೆಯ ಮಾಹಿತಿ ಕೇಳಿದ್ದರು. ಮೇ 23 ರಂದು ಸುಮಾರು 5 ತಾಸು ಅಥಣಿ ಸಿಪಿಐ ಶಂಕರಗೌಡ ಬಸನಗೌಡರ್ ಕೊಟ್ಟಲಗಿ ಜನರಿಂದ ಲಿಖಿತ ರೂಪದಲ್ಲಿ ಹೇಳಿಕೆ ಪಡೆದಿದ್ದರು.
ನಂತರ ಅಥಣಿ ಡಿಎಸ್‍ಪಿ ವರದಿಯನ್ನು ಬೆಳಗಾವಿ ಎಸ್‍ಪಿ ಅವರಿಗೆ ರವಾನಿಸಿದ್ದರು. ಸದ್ಯ ಈಗ ಬೆಳಗಾವಿ ಎಸ್‍ಪಿ ವರ್ಗಾವಣೆ ಶಿಕ್ಷೆಯನ್ನು ನೀಡಿ ಡಿಪಾರ್ಟ್‍ಮೆಂಟ್ ತನಿಖೆಗೆ ಆದೇಶಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ