ಪ್ರಗತಿ ವಾಹಿನಿ ಸುದ್ದಿ, ಶಿರಸಿ: ಶಿರಸಿ ಜಿಲ್ಲೆ ರಚನೆ ಕುರಿತಂತೆ ಶಿರಸಿಯ ಶಾಸಕರೂ ಆಗಿರುವ ರಾಜ್ಯ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಮೌನ ಮುರಿದಿದ್ದಾರೆ.
ಶಿರಸಿಯ ಟಿಎಸ್‍ಎಸ್ ಆಸ್ಪತ್ರೆಯಲ್ಲಿ ನಡೆದ ಇಎಸ್‍ಐ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಗೇರಿ, ಶೀಘ್ರದಲ್ಲಿ ಶಿರಸಿ ಜಿಲ್ಲೆ ರಚನೆಯಾಗುವ ಬಗ್ಗೆ ಸೂಚನೆ ನೀಡಿದ್ದಾರೆ.
ಉತ್ತರ ಕನ್ನಡ ಭೌಗೋಳಿಕವಾಗಿ ಬಹಳ ದೊಡ್ಡ ಜಿಲ್ಲೆ. ಹಾಗಾಗಿ ಆಡಳಿತಾತ್ಮಕ ಅನುಕೂಲತೆಯ ನಿಟ್ಟಿನಲ್ಲಿ ಶಿರಸಿ ಪ್ರತ್ಯೇಕ ಜಿಲ್ಲೆ ರಚನೆಯಾಗಬೇಕು ಎಂಬುದು ಈ ಭಾಗದ ಜನರ ಬೇಡಿಕೆಯಾಗಿದೆ. ಇದನ್ನು ನಾವು ಮುಖ್ಯಮಂತ್ರಿಗಳ ಗಮನಕ್ಕೆ ಈಗಾಗಲೇ ತಂದಿದ್ದೇವೆ. ಸರಕಾರ ಸೂಕ್ತ ಸಮಯದಲ್ಲಿ ಈ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತದೆ ಎಂದರು.
ಘಟ್ಟದ ಮೇಲಿನ ತಾಲೂಕುಗಳ ಜನರ ಸಹಕಾರ ಇದಕ್ಕೆ ಬೇಕು ಎಂದು ಕಾಗೇರಿ ಹೇಳಿದರು. ಅಲ್ಲದೇ, ಈಗಾಗಲೇ ಯಾದಗಿರಿ, ಕೊಪ್ಪಳ, ಉಡುಪಿ, ಹಾವೇರಿ, ಗದಗ ಸೇರಿದಂತೆ ಹಲವಾರು ಪ್ರತ್ಯೇಕ ಜಿಲ್ಲೆಗಳು ಆದರೂ ಶಿರಸಿ ಜಿಲ್ಲೆ ಯಾಕೆ ಆಗಿಲ್ಲ ಎಂದು ಜನ ನನ್ನನ್ನು, ಶಿವರಾಮ ಹೆಬ್ಬಾರ ಅವರನ್ನು ಪ್ರಶ್ನಿಸುತ್ತಾರೆ.
ಹಾಗಾಗಿ ಶೀಘ್ರದಲ್ಲಿ ಸರಕಾರ ಈ ಬಗ್ಗೆ ನಿರ್ಣಯ ಕೈಗೊಳ್ಳುವಂತೆ ನಮ್ಮ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.
ಬೆಳಗಾವಿಗೆ ನಾನೇ ಬರಬೇಕಾಗುತ್ತೆ; ರಾಜ್ಯ ಸರ್ಕಾರಕ್ಕೆ ಬೆದರಿಕೆ ಹಾಕಿದ ಶರದ್ ಪವಾರ್
https://pragati.taskdun.com/karnataka-maharashtra-border-issuesharad-pawarcm-basavaraaj-bommai/
ಆಸ್ಪತ್ರೆಯಲ್ಲಿ ರೋಗಿಗಳ ಹಾಸಿಗೆ ಮೇಲೆ ಗಡದ್ದಾಗಿ ನಿದ್ರಿಸಿದ ಬೀದಿ ನಾಯಿಗಳು!
https://pragati.taskdun.com/dogs-sleep-on-patients-beds-at-health-center/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ