ಬದುಕು ಕಟ್ಟಿಕೊಟ್ಟ ಬಿಎಸ್‌ವೈ

ಸರ್ವರಿಗೂ ಸಮಪಾಲು, ಸಮಪಾಲು ಎನ್ನುವ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ಜನತೆ ಹೇಳಿದ್ದ ಜಯಕಾರ ಈಗ ಫಲ ನೀಡುತ್ತಿದೆ. ಅಂದು ದೂರದೃಷ್ಟಿ ವ್ಯಕ್ತಿತ್ವದ, ಜನ ಸಾಮಾನ್ಯರ ಭಾವನೆಗಳಿಗೆ ತಕ್ಷಣ ಸ್ಪಂದಿಸುವ ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ವಹಿಸಿಕೊಂಡ ರಾಜ್ಯ ಸರಕಾರಕ್ಕೆ ಈಗ ವರ್ಷ ತುಂಬಿದೆ. ಇನ್ನಷ್ಟು ಗಟ್ಟಿಯಾಗಿ ಹತ್ತಾರು ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುತ್ತ ಮುನ್ನಡೆಯುತ್ತಿರುವುದು ರಾಜ್ಯದ ಹಿತದೃಷ್ಟಿಯಿಂದ ಅತ್ಯುತ್ತಮ ಬೆಳವಣಿಗೆ.

ವಿಧಾನಪರಿಷತ್ ಸರಕಾರದ ಸಚೇತಕ ಮಹಾಂತೇಶ ಕವಟಗಿಮಠ ಅವರು ಬರೆದಿರುವ ಸರಕಾರದ ಸಾಧನೆ ಮೇಲೆ ಬೆಳಕು ಚೆಲ್ಲುವ ಲೇಖನ ಇಲ್ಲಿದೆ –
 

 ಮಹಾಂತೇಶ ಕವಟಗಿಮಠ
೨೦೧೮ರ ವಿಧಾನಸಭೆ ಚುನಾವಣೆ ನಂತರ ಭಾರತೀಯ ಜನತಾ ಪಾರ್ಟಿ ರಾಜ್ಯದ ಚುಕ್ಕಾಣಿ ಹಿಡಿಯಬೇಕೆಂಬುದು ಜನತೆಯ ನಿರೀಕ್ಷೆಯಾಗಿತ್ತು. ಈ ಸಂದರ್ಭದಲ್ಲಿ ಅತ್ಯಲ್ಪ ಮತಗಳ ಅಂತರದಲ್ಲಿ ಬಿಜೆಪಿ ಬಹುತದಿಂದ ದೂರ ಉಳಿದಿದ್ದರೂ ಅಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ವಿಪ್ಲವ ರಾಜ್ಯದ ಮಹಾಜನತೆಯ ಆಶಯದಂತೆ ಬಿಜೆಪಿಯನ್ನು ಅಕಾರದ ಗದ್ದುಗೆಗೆ ಏರಿಸಿತ್ತು. ಈ ಮೂಲಕ ಜನತೆ ಕಂಡ ಕನಸು ಹುಸಿಗೊಳ್ಳಲಿಲ್ಲ.
ಅಂದು ದೂರದೃಷ್ಟಿ ವ್ಯಕ್ತಿತ್ವದ, ಜನ ಸಾಮಾನ್ಯರ ಭಾವನೆಗಳಿಗೆ ತಕ್ಷಣ ಸ್ಪಂದಿಸುವ ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ವಹಿಸಿಕೊಂಡ ರಾಜ್ಯ ಸರಕಾರಕ್ಕೆ ಈಗ ವರ್ಷ ತುಂಬಿದೆ. ಇನ್ನಷ್ಟು ಗಟ್ಟಿಯಾಗಿ ಹತ್ತಾರು ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುತ್ತ ಮುನ್ನಡೆಯುತ್ತಿರುವುದು ರಾಜ್ಯದ ಹಿತದೃಷ್ಟಿಯಿಂದ ಅತ್ಯುತ್ತಮ ಬೆಳವಣಿಗೆ.
ಧರ್ಮ, ಜಾತಿ ಆಧಾರದ ಮೇಲೆ ಸಮುದಾಯಗಳನ್ನು ವಿಂಗಡಿಸುವ ಕಾಂಗ್ರೆಸ್ ನೀತಿಯನ್ನು ಜನ ತಿರಸ್ಕರಿಸಿ ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ಜನತೆ ಹೇಳಿದ್ದ ಜಯಕಾರ ಈಗ ಫಲ ನೀಡುತ್ತಿದೆ. ಯಡಿಯೂರಪ್ಪ ಅವರು ಅಕಾರಕ್ಕೆ ಬಂದಾಗ ಇತಿಹಾಸದಲ್ಲೇ ಕಂಡು ಕೇಳರಿಯದ ನೆರೆ-ಪ್ರವಾಹ ರಾಜ್ಯವನ್ನು ಕಾಡಿತು. ಅತ್ಯಂತ ಭೀಕರ ಅತಿವೃಷ್ಟಿಯಲ್ಲೂ ಅತ್ಯಂತ ಹಿರಿಯ ಮತ್ತು ಅನುಭವಿ ಯಡಿಯೂರಪ್ಪ ಅವರು ತಮಗೆ ಮತ್ತು ತಮ್ಮ ಸರಕಾರದ ಮುಂದೆ ಎದುರಾದ ಅಗ್ನಿ ಪರೀಕ್ಷೆಯನ್ನು ಸಮರ್ಥವಾಗಿ ನಿಭಾಯಿಸಿದ್ದು ಕೂಡ ರಾಜ್ಯದ ರಾಜಕೀಯ ಇತಿಹಾಸದಲ್ಲಿ ದಾಖಲೆ.

ಕೋವಿಡ್ ವಾರಿಯರ್

ಜಗತ್ತನ್ನು ಕಾಡುತ್ತಿರುವ ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯುವಕರನ್ನೂ ನಾಚಿಸುವಂತೆ ನಿರ್ವಹಿಸುತ್ತಿರುವ ಕಾರ್ಯವೈಖರಿ ಸಮಾಜಕ್ಕೆ ಮಾದರಿ. ೨೪*೭ ಮಾದರಿಯಲ್ಲಿ ಸಚಿವರು, ಅಕಾರಿಗಳ ತಂಡ ರಚಿಸಿ ಸಾರ್ವಜನಿಕರ ಆರೋಗ್ಯ ರಕ್ಷಣೆಯ ಹೊಣೆ ಹೊತ್ತಿದ್ದಾರೆ. ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಕೈಗೊಳ್ಳುತ್ತಿರುವ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ರಾಜ್ಯ ಸರಕಾರ ಕೋವಿಡ್-೧೯ನ್ನು ಸಮರ್ಥವಾಗಿ ಎದುರಿಸುತ್ತಿದೆ.

ಆಪದ್ಬಾಂಧವ:

ನೆರೆಯಿಂದ ನೆಲೆ ಕಳೆದುಕೊಂಡ ಪ್ರತಿಯೊಬ್ಬರಿಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಮಸ್ತ ಸಚಿವರು ಸ್ಪಂದಿಸಿ ಸಹಾಯ ಹಸ್ತ ಚಾಚಿರುವುದು ನಾಡಿನ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ. ನೆಲೆ ಕಳೆದುಕೊಂಡವರಿಗೆ ತಕ್ಷಣ ಸೂರಿನ ಭರವಸೆ ಜತೆಗೆ ೧೦ ಸಾವಿರ ರೂ.ಧನ ಸಹಾಯ ನೀಡುವ ಮೂಲಕ ಸಿಎಂ ಯಡಿಯೂರಪ್ಪ ಆಪದ್ಭಾಂದವರೆನಿಸಿಕೊಂಡರು. ಆಸೆ ಕಳೆದುಕೊಂಡವರಿಗೆ ಹಾನಿ ಆಧರಿಸಿ ೫೦ ಸಾವಿರ ರೂ.ದಿಂದ ೫ ಲಕ್ಷ ರೂ.ವರೆಗೂ ಸಹಾಯ ಧನ ನೀಡುವ ಮೂಲಕ ಮತ್ತೆ ಬದುಕು ಕಟ್ಟಿಕೊಳ್ಳಲು ನೆರವಾದ ರೀತಿಯೂ ದಾಖಲಾರ್ಹ. ನೆರೆಯಲ್ಲಿ ಪ್ರಾಣಾಪಾಯದಲ್ಲಿದ್ದ ಜಾನುವಾರುಗಳ ರಕ್ಷಣೆಗೆ ವಿಶೇಷ ಹೆಜ್ಜೆ ಇಡುವ ಮೂಲಕ ಜನಾನುರಾಗಿ ಸರಕಾರ ಎನಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

 

ಉಕದೊಂದಿಗೆ ಉತ್ತಮ ನಂಟು, ಕೆಎಲ್‌ಇ ಸಾಥ್

 

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದೊಂದಿಗೂ ಉತ್ತಮ ನಂಟು ಹೊಂದಿದ್ದಾರೆ. ಸಮ್ಮಿಶ್ರ ಸರಕಾರ ಸಂದರ್ಭದಲ್ಲೇ ಪ್ರಾದೇಶಿಕ ಅಸಮತೋಲನ ಹೋಗಲಾಡಿಸುವ ಮತ್ತು ಬೆಂಗಳೂರಿಗೆ ಸೀಮಿತವಾಗಿರುವ ಆಡಳಿತವನ್ನು ಉತ್ತರದತ್ತ ತರುವ ಕನಸು ಕಂಡಿದ್ದ ಬಿ.ಎಸ್.ವೈ. ತಮ್ಮ ಮುಂದಿನ ಬಿಜೆಪಿ ಸರಕಾರದ ಅವಯಲ್ಲಿ ಹಂತಹಂತವಾಗಿ ಕನಸು ನನಸಾಗಿಸುತ್ತ ಬಂದಿದ್ದಾರೆ. ಬಿಎಸ್‌ವೈ ಕನಸಿನ ಸುವರ್ಣ ವಿಧಾನಸೌಧ ಕೂಡ ಬಿಜೆಪಿ ಅವಯಲ್ಲಿ ತಲೆ ಎತ್ತಿ ನಿಂತಿರುವುದು ವಿಶೇಷ.
ಸುವರ್ಣ ವಿಧಾನಸೌಧ ನಿರ್ಮಾಣಕ್ಕೂ ಮುಂಚೆಯೇ ಕೆಎಲ್‌ಇ ಸಂಸ್ಥೆ ಅವೇಶನಕ್ಕೆ ಆಶ್ರಯ ನೀಡುವ ಮೂಲಕ ಬುನಾದಿ ಹಾಕಿದ್ದು ಉತ್ತರದ ಜನತೆ ಹೆಮ್ಮೆಯೂ ಹೌದು. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಿಸುವ ಕೃಷ್ಣಾ ನದಿ ತೀರದಲ್ಲಿ ಪ್ರತಿ ೧೦ ಕಿಮೀಗೆ ಒಂದರಂತೆ ಬ್ಯಾರೇಜ್ ನಿರ್ಮಿಸಬೇಕು ಎನ್ನುವ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಕನಸಿನಂತೆ ಈಗ ದಿಗ್ಗೇವಾಡಿ ಬ್ಯಾರೇಜ್ ಸೇರಿದಂತೆ ಕೃಷ್ಣಾ ತೀರದಲ್ಲಿ ೮ ಹೊಸ ಬ್ಯಾರೇಜ್ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಕ್ಕಿದೆ. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಜಲಸಂಪನ್ಮೂಲ ಸಚಿವರಾಗಿರುವುದು ಯೋಜನೆ ಅನುಷ್ಠಾನಕ್ಕೆ ಇನ್ನಷ್ಟು ಬಲ ಬಂದಿದೆ.
ಮಹಾರಾಷ್ಟ್ರದ ವಸಂತದಾದಾ ಸಕ್ಕರೆ ಸಂಸ್ಥೆ ಮಾದರಿಯಲ್ಲಿ ಉತ್ತರ ಕರ್ನಾಟಕದಲ್ಲಿ ಹೊಸ ಕಬ್ಬಿನ ತಳಿ, ರೋಗ ನಿರೋಧಕಗಳ ಸಂಶೋಧನೆಗೆ ಒತ್ತು ನೀಡಲು ಬಿ.ಎಸ್.ವೈ. ಬೆಳಗಾವಿಯಲ್ಲಿ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ನಿರ್ಮಾಣಕ್ಕೆ ಅಸ್ತು ಹೇಳಿದ್ದರು. ಮಹದಾಯಿ ಯೋಜನೆಗೆ ೧೦೦ ಕೋಟಿ ರೂ.ಕೊಟ್ಟು ಕಾಲುವೆ ನಿರ್ಮಾಣಕ್ಕೆ ನಾಂದಿ ಹಾಡಿದ್ದ ಯಡಿಯೂರಪ್ಪ ಅವರ ಅವಯಲ್ಲೇ ಈಗ ಮಹದಾಯಿ ಯೋಜನೆಗೆ ಕೇಂದ್ರ ಸರಕಾರ ಗ್ರೀನ್ ಸಿಗ್ನಲ್ ನೀಡಿರುವುದರಿಂದ ಬಿಜೆಪಿ ಅವಯಲ್ಲೇ ಕಾಮಗಾರಿ ಪೂರ್ಣಗೊಳ್ಳುವ ಮತ್ತೊಂದು ನಿರೀಕ್ಷೆ ಹುಟ್ಟಿಕೊಂಡಿದೆ. ಬೆಳಗಾವಿ ನಗರದ ಅಭಿವೃದ್ಧಿಗೂ ಬಿಎಸ್‌ವೈ ಅಕಾರವಯಲ್ಲೇ ಪ್ರತಿ ವರ್ಷ ೧೦೦ ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಿದ್ದರು.

ದಿಟ್ಟ ವ್ಯಕ್ತಿತ್ವ:

ಪ್ರವಾಹ ಸಂದರ್ಭದಲ್ಲಿ ದೂರದಲ್ಲಿ ನಿಂತು ಸಹಾಯಕ್ಕೆ ಸೀಮಿತರಾಗದೆ ಸ್ವತಃ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೂ ಕೂಡ ಅವರಲ್ಲಿನ ಸಾರ್ವಜನಿಕ ಕಳಕಳಿಯನ್ನು ಎತ್ತಿ ತೋರುತ್ತದೆ. ತಮ್ಮ ಜತೆಗೆ ಕೇಂದ್ರ ಸರಕಾರದ ಗೃಹ ಮತ್ತು ರಕ್ಷಣಾ ಸಚಿವರನ್ನೂ ಕರೆದು ತಂದು ನೆರೆ ಹಾನಿಯನ್ನು ತೋರಿಸಿ ಮನವರಿಕೆ ಮಾಡುವಲ್ಲೂ ಯಶಸ್ವಿಯಾದರು. ವರ್ಷ ಕಳೆದ ನಂತರವೂ ನೆರೆ ಪರಿಹಾರದಿಂದ ವಂಚಿತರಾದವರ ಬಗ್ಗೆಯೂ ಮುಖ್ಯಮಂತ್ರಿ ಗಮನ ಸೆಳೆದಾಗ ಕಿಂಚಿತ್ತೂ ಕದಲದೆ ಸಹಾಯದ ಭರವಸೆ ನೀಡಿರುವುದು ಭವಿಷ್ಯದ ನಾಯಕರಿಗೆ ಅತ್ಯುತ್ತಮ ಪಾಠವೂ ಹೌದು. ಉಪ ಚುನಾವಣೆ, ಮಂತ್ರಿಮಂಡಳ ಪುನರ್‌ರಚನೆಯಲ್ಲಿ ವಿರೋಧ ಪಕ್ಷಗಳೂ ನಾಚುವಂತೆ ಗೆಲುವು ಸಾಸಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ದಿಟ್ಟತನಕ್ಕೆ ಸಾಕ್ಷಿಘಿ. ದಿಟ್ಟ ಮತ್ತು ನಿಷ್ಠೆಯ ನಾಯಕರ ನೇತೃತ್ವದಲ್ಲಿ ಬಿಜೆಪಿ ಸರಕಾರ ಪೂರ್ಣಾವ ಆಡಳಿತ ನೀಡಲಿದೆ.
ಬರುವ ದಿನಗಳಲ್ಲಿ ಕೋವಿಡ್-೧೯ ಹತೋಟಿಗೆ ಬರುತ್ತಿದ್ದಂತೆ ರಾಜ್ಯದಲ್ಲಿ ಮತ್ತಷ್ಟು ಅಭಿವೃದ್ಧಿ ಯೋಜನೆಗಳು ಇನ್ನಷ್ಟು ವೇಗ ಪಡೆದುಕೊಳ್ಳಲಿ ಎನ್ನುವ ಆಶಾಭಾವನೆಯೊಂದಿಗೆ ಅತ್ಯುತ್ತಮ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಚಿವ ಸಂಪುಟ ಸದಸ್ಯರು ಹಾಗೂ ಸಮಸ್ತ ಅಕಾರಿ ವರ್ಗಕ್ಕೆ ಬೆಳಗಾವಿ ಜಿಲ್ಲೆಯ ಜನತೆ ಮತ್ತು ಪಕ್ಷದ ಕಾರ್ಯಕರ್ತರ ಪರವಾಗಿ ಹಾರ್ದಿಕ ಅಭಿನಂದನೆಗಳು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button