Belagavi NewsBelgaum NewsPolitics

*ಉತ್ತರ ಕರ್ನಾಟಕದ‌ ಬಗ್ಗೆ ವಿಶೇಷ ಒತ್ತು ಕೊಡಲಾಗುವುದು: ಸಚಿವ ಎಚ್.ಕೆ ಪಾಟೀಲ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಂದಿನಿಂದ ಉತ್ತರ ಕರ್ನಾಟಕ ಭಾಗದ ಅಭಿವೃದ್ದಿ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಉತ್ತರ ಕರ್ನಾಟಕದ‌ ಬಗ್ಗೆ ವಿಶೇಷ ಒತ್ತು ಕೊಡಲಾಗುವುದು. ಸಿಎಂ ಜೊತೆ ಈ ಬಗ್ಗೆ ಚರ್ಚೆ ಮಾಡಲಿದ್ದೇವೆ. ಅತ್ಯಂತ ಪರಿಣಾಮಕಾರಿಯಾಗಿ ಉತ್ತರ ಕರ್ನಾಟಕ‌ ಭಾಗದ ಬಗ್ಗೆ ಚರ್ಚೆ ಆಗಲಿದೆ ಎಂದು ಸಚಿವ ಎಚ್ .ಕೆ.ಪಾಟೀಲ್ ಹೇಳಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಅಭಿವೃದ್ದಿ ವಿಚಾರದಲ್ಲಿ ಈ‌ ಹಿಂದಿನಿಂದಲೂ‌ ಅನ್ಯಾಯ ಆಗುತ್ತಲೆ ಇದೆ. ನಂಜುಂಡಪ್ಪ ವರದಿ‌ ಪ್ರಕಾರ ಈವರೆಗೂ ಕಾರ್ಯಕ್ರಮ ಮುಂದುವರೆಸಿಕೊಂಡು ಬರಲಾಗುತ್ತಿದೆ. ಆ ಎಲ್ಲ ಕಾರ್ಯಕ್ರಮಗಳನ್ನು ಸರ್ಕಾರ ಮುಂದುವರೆಸಿಕೊಂಡು ಹೋಗುತ್ತಿದೆ. ಈಗಾಗಲೆ ಸಾಹಿತ್ಯ ಸಮ್ಮೇಳನ‌ ಹಿನ್ನೆಲೆ‌‌ ಮೊದಲೆ ಅಧಿವೇಶನ‌ ನಿಗಧಿಪಡಿಸಲಾಗಿತ್ತು. ಹಾಗಾಗಿ 19 ರಂದು ಅಧಿವೇಶನ ಮುಕ್ತಾಯಗೊಳಿಸಲಾಗುತ್ತಿದೆ. ಈ ಹಿನ್ನೆಲೆ ನಾವು ಯಾವುದೆ ಪಲಾಯನ‌ಮಾಡುವ ಪ್ರಶ್ನೆಯೆ ಇಲ್ಲ. ಸರ್ಕಾರದ ಹಗರಣಗಳ ಬಗ್ಗೆ ವಿಪಕ್ಷಗಳು ಯಾವುದೆ ಆರೋಪವನ್ನೂ ಮಾಡಿಲ್ಲ. ಅಧಿವೇಶನದಲ್ಲಿ ಈ ಬಗ್ಗೆ ವಿಪಕ್ಷಗಳು ಚರ್ಚೆಯೂ ಮಾಡಿಲ್ಲ. ಅದು ಹೇಗೆ ನಾವು ಪಲಾಯನವಾದ ಮಾಡುತ್ತೇವೆ ಅಂತಾ ಆರೋಪ ಮಾಡುತ್ತಾರೆ ಎಂದು ವಿಪಕ್ಷ ನಾಯಕ‌ ಆರ್ ಅಶೋಕ್ ಆರೋಪಕ್ಕೆ ಸಚಿವ ಎಚ್.ಕೆ.ಪಾಟೀಲ್ ತಿರುಗೇಟು ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button