*ವಿಶೇಷ ಚೇತನ ಮಕ್ಕಳ ಏಳಿಗೆಗೆ ಶ್ರಮಿಸುವುದು ನಮ್ಮ ಗುರಿ; ಶಶಿಕಲಾ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರವಿವಾರ ಯಕ್ಸಂಬಾ ಪಟ್ಟಣದ ಹೊರವಲಯದಲ್ಲಿರುವ ನನದಿ ಜೊಲ್ಲೆ ಎಜುಕೇಶನ್ ಸೊಸೈಟಿ ಸಭಾಗೃಹದಲ್ಲಿ ವಿಶೇಷ ಒಲಿಂಪಿಕ್ಸ್ ಭಾರತ್ ಕರ್ನಾಟಕ ಬೆಳಗಾವಿ ವಲಯ ಮಟ್ಟದ (ಬಾಗಲಕೋಟ, ವಿಜಯಪುರ, ಧಾರವಾಡ, ಗದಗ, ಬೆಳಗಾವಿ) ಇದರ ವಿಶೇಷ ಶಿಕ್ಷಕರ ತರಬೇತಿ ಕಾರ್ಯಾಗಾರ ಸಭೆಯನ್ನು ವಿಶೇಷ ಒಲಂಪಿಕ್ಸ್ ಕರ್ನಾಟಕ ರಾಜ್ಯಾಧ್ಯಕ್ಷರು ಹಾಗೂ ನಿಪ್ಪಾಣಿ ಶಾಸಕರಾದ ಶಶಿಕಲಾ ಜೊಲ್ಲೆ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಉದ್ಘಾಟಿಸಿದರು.

ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ,ವಿಶೇಷ ಒಲಂಪಿಕ್ಸ್ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ನಾನು ಕಾರ್ಯನಿರ್ವಹಿಸುತ್ತಿದ್ದು,ವಿಶೇಷ ಚೇತನ ಮಕ್ಕಳ ಏಳಿಗೆಗೆ ಶ್ರಮಿಸುವುದು ನಮ್ಮ ಗುರಿಯಾಗಿದೆ.ಇಡೀ ಕರ್ನಾಟಕದಾದ್ಯಂತ ಜಿಲ್ಲಾವಾರು ಶಿಕ್ಷಕರ ತರಬೇತಿ ನಡಿಸಿ,ಅತಿಹೆಚ್ಚು ಕ್ರೀಡಾಪಟುಗಳು ಒಲಪಿಂಕ್ಸನಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ನಾವು ಸಹಾಯ, ಸಹಕಾರ ಮಾಡುತ್ತಿದ್ದು,ಇದಕ್ಕೆ ಎಲ್ಲ ಶಿಕ್ಷಕರು,ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ, ಕಾರ್ಯನ್ಮೋಖರಾಗಬೇಕು.ಯಾವುದೇ ಕುಟುಂಬದಲ್ಲಿ ದಿವ್ಯಾಂಗ ಮಕ್ಕಳಿದ್ದರೆ ಆ ಕುಟುಂಬಕ್ಕೆ ನೋವು ಇರುತ್ತದೆ.ನೋವು ಅಳಿಸುವ ಕಾರ್ಯ ನಮ್ಮಿಂದ ಆಗಬೇಕು. ವಿಶೇಷಚೇತನ ಮಕ್ಕಳ ಪಾಲಕರಿಗೆ ಧೈರ್ಯ ತುಂಬುವ ಜವಾಬ್ದಾರಿ ನಮ್ಮದಾಗಿದೆ ಎಂದು ಹೇಳಿದರು.
ಬಳಿಕ ಅಮರೇಂದ್ರ ಎ, ಅವರು ಕ್ರೀಡೆಯ ಬಗ್ಗೆ ಸವಿಸ್ತಾರವಾಗಿ 5 ಗಂಟೆಗಳ ಕಾಲ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಂಸದರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ, ವಿಶೇಷ ಒಲಂಪಿಕ್ಸ್ ಕಾರ್ಯದರ್ಶಿಯಾದ ಶ್ರೀ ಅಮರೇಂದ್ರ ಎ, ಕಾರ್ಯಕ್ರಮದ ವ್ಯವಸ್ಥಾಪಕರಾದ ಶ್ರೀ ದೀಪಕ, ಜ್ಯೋತಿಪ್ರಸಾದ ಜೊಲ್ಲೆ,ರಾಜು ಹಿರೇಮಠ, 5 ಜಿಲ್ಲೆಯ ವಿಶೇಷ ಚೇತನ ಮಕ್ಕಳ ಶಿಕ್ಷಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ