Belagavi NewsBelgaum NewsKannada NewsKarnataka NewsNational

*ಬೆಳಗಾವಿಯಿಂದ ಪಂಢರಪುರಕ್ಕೆ ವಿಶೇಷ ರೈಲು*

ಪ್ರಗತಿವಾಹಿನಿ ಸುದ್ದಿ: ಕಾರ್ತಿಕ ಏಕಾದಶಿಯ ಪ್ರಯುಕ್ತ ದಿನಾಂಕ 9.11.2024 ರಿಂದ 16.11.2024ರ ಅವಧಿಯಲ್ಲಿ ಭಕ್ತಾದಿಗಳು ಪುಣ್ಯಕ್ಷೇತ್ರವಾದ ಪಂಢರಾಪುರದ ಶ್ರೀ ವಿಠ್ಠಲ – ರುಕ್ಮಾಯಿ ತೆರಳಲು ಅನುಕೂಲವಾಗುವ ನಿಟ್ಟಿನಲ್ಲಿ ಬೆಳಗಾವಿ ಮಾರ್ಗವಾಗಿ ಹುಬ್ಬಳ್ಳಿ ಪಂಢರಾಪುರ ವಿಶೇಷ ರೈಲು ಸೌಲಭ್ಯವನ್ನು ರೈಲ್ವೆ ನೈರುತ್ಯ ವಲಯ ಕಲ್ಪಿಸಿದೆ ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ್ ಇವರು ತಿಳಿಸಿದ್ದಾರೆ.

ಪ್ರಸ್ತಾಪಿತ ಅವಧಿಯಲ್ಲಿ ಈ ರೈಲು (ಟ್ರೈನ್ ನಂ.07313) ಹುಬ್ಬಳ್ಳಿಯಿಂದ ಸಾಯಂಕಾಲ 7:45 ಕ್ಕೆ ಹೊರಟು ಬೆಳಗಾವಿಗೆ ರಾತ್ರಿ 10:05ಕ್ಕೆ ಆಗಮಿಸಿ ನಂತರ ಪಂಢರಾಪುರವನ್ನು ಮರುದಿನ ಬೆಳಗ್ಗೆ 4:30ಕ್ಕೆ ತಲುಪುವುದು.

ಅದರಂತೆ ಇದೆ ರೈಲು (ಟ್ರೈನ್ ನಂ.07314) ಪಂಢರಾಪುರದಿಂದ ಬೆಳಗ್ಗೆ 6 ಗಂಟೆಗೆ ಹೊರಟು ಬೆಳಗಾವಿಯನ್ನು ಮಧ್ಯಾಹ್ನ 01:10 ಕ್ಕೆ ತಲುಪಿ ತದನಂತರ ಹುಬ್ಬಳ್ಳಿಯನ್ನು ಸಾಯಂಕಾಲ 4:30ಕ್ಕೆ ತಲುಪುವುದು.

ಪಂಢರಾಪುರದ ಶ್ರೀ ವಿಠ್ಠಲ – ರುಕ್ಮಾಯಿ ಭಕ್ತಾದಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಬೆಳಗಾವಿ ಸಂಸದರಾದ ಶ್ರೀ ಜಗದೀಶ್ ಶೆಟ್ಟರ್ ಅವರು ಪತ್ರಿಕಾ ಪ್ರಕಟಣೆಯ ಮುಖಾಂತರ ಕೋರಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button