Belagavi NewsBelgaum NewsKannada NewsKarnataka News

*ಬೆಂಗಳೂರು-ಬೆಳಗಾವಿ ನಡುವೆ ವಿಶೇಷ ರೈಲು ಸಂಚಾರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನೈಋತ್ಯ ರೈಲ್ವೆಯು ಗುಡ್ ಫ್ರೈಡೇ ಹಾಗೂ ಈಸ್ಟರ್ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಬೆಂಗಳೂರು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಮತ್ತು ಬೆಳಗಾವಿ (BGM) ನಡುವೆ ವಿಶೇಷ  ಎಕ್ಸ್‌ಪ್ರೆಸ್ ರೈಲು ಓಡಿಸಲು ನಿರ್ಧರಿಸಿದೆ.

ರೈಲು ಸಂಖ್ಯೆ 06503, ಏಪ್ರಿಲ್ 2ರ ಗುರುವಾರ ಸಂಜೆ 7:00 ಗಂಟೆಗೆ ಬೆಂಗಳೂರಿನ ಎಸ್‌ಎಂವಿಟಿ ನಿಲ್ದಾಣದಿಂದ ಹೊರಟು, ಮರುದಿನ ಶುಕ್ರವಾರ ಬೆಳಿಗ್ಗೆ 7:35ಕ್ಕೆ ಬೆಳಗಾವಿಗೆ ತಲುಪಲಿದೆ (ಏಕಮುಖ ಸಂಚಾರ).

ರೈಲು ಸಂಖ್ಯೆ 06504, ಏಪ್ರಿಲ್ 5ರ ಭಾನುವಾರ ಸಂಜೆ 5:30ಕ್ಕೆ ಬೆಳಗಾವಿ ನಿಲ್ದಾಣದಿಂದ ಹೊರಟು, ಮರುದಿನ ಸೋಮವಾರ ಬೆಳಿಗ್ಗೆ 5:00 ಗಂಟೆಗೆ ಬೆಂಗಳೂರು ಎಸ್‌ಎಂವಿಟಿ ನಿಲ್ದಾಣಕ್ಕೆ ಆಗಮಿಸಲಿದೆ (ಏಕಮುಖ ಸಂಚಾರ).

ಈ ವಿಶೇಷ ರೈಲುಗಳು ಒಟ್ಟು 19 ಐಸಿಎಫ್ (ICF) ಬೋಗಿಗಳನ್ನು ಹೊಂದಿದ್ದು , ತನ್ನ ಮಾರ್ಗ ಮಧ್ಯೆದ ಸಂಚಾರದಲ್ಲಿ  ಚಿಕ್ಕಬಾಣಾವರ (BAW)  ತುಮಕೂರು, (TK), ಅರಸೀಕೆರೆ (ASK), ಬೀರೂರು  (RRB), ದಾವಣಗೆರೆ  (DVG) , ಹರಿಹರ, (HRR), ಹಾವೇರಿ  (HVR), SSS ಹುಬ್ಬಳ್ಳಿ (UBL) ಧಾರವಾಡ (DWR),  ಅಳ್ನಾವರ  (LWR), ಲೋಂಡಾ  (LD) ಹಾಗೂ  ಖಾನಾಪುರ ರೈಲು ನಿಲ್ದಾಣ (KNP) ಗಳ ಮೂಲಕ ಸಂಚರಿಸಲಿವೆ.

Home add -Advt

Special Trains between Bengaluru and Belagavi

In view of the increased passenger rush during Good Friday and Easter, South Western Railway has decided to operate special express train services between Sir M. Visvesvaraya Terminal, Bengaluru (SMVT) and Belagavi (BGM).

Train No. 06503 will depart from SMVT, Bengaluru at 7:00 PM on Thursday, April 2 and arrive in Belagavi at 7:35 AM on Friday (one-way service)

Train No. 06504 will depart from Belagavi at 5:30 PM on Sunday, April 5 and arrive at SMVT, Bengaluru at 5:00 AM on Monday (one-way service).

The special trains will consist of a total of 19 ICF coaches and will run via Chikkabanavara (BAW), Tumakuru (TK), Arsikere (ASK), Birur (RRB), Davangere (DVG), Harihar (HRR), Haveri (HVR),  SSS Hubballi (UBL), Dharwad (DWR), Alnavar (LWR), Londa (LD) and Khanapur (KNP) stations en route.

Related Articles

Back to top button