Kannada NewsLatest

ಪ್ರೇಕ್ಷಣಿಯ ಸ್ಥಳಗಳ ವೀಕ್ಷಣೆಗೆ ವಿಶೇಷ ಸಾರಿಗೆ ಸೌಲಭ್ಯ

ಪ್ರೇಕ್ಷಣಿಯ ಸ್ಥಳಗಳ ವೀಕ್ಷಣೆಗೆ ವಿಶೇಷ ಸಾರಿಗೆ ಸೌಲಭ್ಯ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : 2019-20ನೇ ಸಾಲಿನಲ್ಲಿ ಅಧಿಕ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯಿಂದ ತುಂಬಿ ಹರಿಯುತ್ತಿರುವ ಜಲಧಾರೆಗಳ ವೀಕ್ಷಣೆಗೆ ಹೋಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗಾವಿಯಿಂದ ಪ್ರತಿ ಭಾನುವಾರ ಹಾಗೂ ಇತರೆ ಸಾರ್ವತ್ರಿಕ ರಜೆ ದಿನಗಳಂದು ಜುಲೈ 14 ರಿಂದ ಅಗಷ್ಟ 25 ರ ವರೆಗೆ ಕೇಂದ್ರ ಬಸ್ ನಿಲ್ದಾಣದಿಂದ ಪ್ರಯಾಣಿಸಲು ಪ್ಯಾಕೇಜ್ ರೀತಿಯಲ್ಲಿ ವೇಗದೂತ ಸಾರಿಗೆ ಮೂಲಕ ಪ್ರವಾಸದ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ಯಾಕೇಜ್-1 ಬೆಳಗಾವಿಯಿಂದ ಹಿಡಕಲ್ ಡ್ಯಾಂ -ಗೋಡಚಿ ಮಲ್ಕಿ- ಗೋಕಾಕ ಫಾಲ್ಸ್ ಮಾರ್ಗ : ಪ್ರಯಾಣಿಕರಿಗೆ ಹೋಗಿ ಬರುವ ಎರಡು ಸೇರಿ ರೂ. 160 ದರ ಇರುತ್ತದೆ.

ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಿಂದ ಬೆಳಗ್ಗೆ 9 ಗಂಟೆಗೆ ಹೊರಟು 10 ಗಂಟೆಗೆ ಹಿಡಕಲ್ ಡ್ಯಾಂ ತಲಪುವುದು ನಂತರ 1 ಗಂಟೆಯವರೆಗೆ ಸ್ಥಳ ವೀಕ್ಷಣೆ ಅವಕಾಶ ನೀಡಲಾಗುವದು. 11 ಗಂಟೆಗೆ ಹಿಡಕಲ್ ಡ್ಯಾಂ ನಿಂದ ನಿರ್ಗಮಿಸಿ 11: 30 ಕ್ಕೆ ಗೋಡಚಿ ಮಲ್ಕಿ ತಲಪುವುದು 1 ಗಂಟೆ 30 ನಿಮಿಷದ ವರೆಗೆ ಸ್ಥಳ ವೀಕ್ಷಣೆಗೆ ಅವಕಾಶ ನಂತರ ಮಧ್ಯಾನ್ಹ 1 ಗಂಟೆಗೆ ಗೋಡಚಿ ಮಲ್ಕಿಯಿಂದ ನಿರ್ಗಮಿಸಿ 1.30 ಕ್ಕೆ ಗೋಕಾಕ ಫಾಲ್ಸ್ ತಲಪುವುದು 2 ಗಂಟೆ 30 ನಿಮಿಷ ಸ್ಥಳ ವಿಕ್ಷಣೆಗೆ ಅವಕಾಶವಿರುವದು ನಂತರ 4 ಗಂಟೆಗೆ ಗೋಕಾಕ ಪಾಲ್ಸ್ ನಿಂದ ನಿರ್ಗಮಿಸಿ ಸಾಯಂಕಾಲ 6 ಗಂಟೆಗೆ ಬೆಳಗಾವಿಗೆ ತಲಪುವುದು.

ಪ್ಯಾಕೇಜ್-2 : ಬೆಳಗಾವಿಯಿಂದ ನಾಗರ ತಾಸ ಜಲಧಾರೆ – ಹಿರಣ್ಯಕೇಶಿ ನದಿಯ ಉಗಮಸ್ಥಾನ- ಅಂಬೋಲಿ ಮಾರ್ಗ : ಪ್ರಯಾಣಿಕರಿಗೆ ಪ್ರಯಾಣಿಕರಿಗೆ ಹೋಗಿ ಬರುವ ಎರಡು ಸೇರಿ ರೂ. 260 ದರ ಇರುತ್ತದೆ. ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಿಂದ ಬೆಳಗ್ಗೆ 9 ಗಂಟೆಗೆ ಹೊರಟು 11 ಗಂಟೆಗೆ ನಾಗರ ತಾಸ ಜಲಧಾರೆ ತಲುಪಿ 1 ಗಂಟೆಯ ಕಾಲ ಸ್ಥಳ ವೀಕ್ಷಣೆ ಮಾಡಬಹುದು. ನಂತರ ಮಧ್ಯಾನ್ಹ 12 ಗಂಟೆಗೆ ನಾಗರ ತಾಸ ಜಲಧಾರೆಯಿಂದ ನಿರ್ಗಮಿಸಿ 12.30 ಕ್ಕೆ ಅಂಬೋಲಿ ಜಲಧಾರೆಯನ್ನು ತಲಪುವುದು 3 ಗಂಟೆ 30 ನಿಮಿಷದ ವರೆಗೆ ಅಂಬೋಲಿ ಜಲಧಾರೆಯನ್ನು ವಿಕ್ಷಣೆಗೆ ಮಾಡಲು ಅವಕಾಶವಿರುವದು ನಂತರ 4 ಗಂಟೆಗೆ ಅಂಬೋಲಿ ಜಲಧಾರೆಯಿಂದ ನಿರ್ಗಮಿಸಿ ಸಾಯಂಕಾಲ 6 ಗಂಟೆಗೆ ಬೆಳಗಾವಿಗೆ ತಲಪುವುದು.

ಸದರಿ ಸಾರಿಗೆಗಳಿಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೇಟ ಕಾಯ್ದಿರಿಸುವ ವ್ಯವಸ್ಥೆ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ನಿಲ್ದಾಣ ಮೇಲ್ವಿಚಾರಕರು ಕೇ.ಬ.ನಿ ಬೆಳಗಾವಿ ಮೋ.ಸಂ 7760991612, 7760991613 ಹಾಗೂ ಘಟಕ ವ್ಯವಸ್ಥಾಪಕರು ಬೆಳಗಾವಿ-1 ಮೊ.ಸಂ 7760991625 ರವರನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ವಾಕರಸಾಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button