
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ರಾಮಮಂದಿರ ನಿರ್ಮಾಣಕ್ಕಾಗಿ ಹಸಿರು ನಿಶಾನೆ ನೀಡಿ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ರಾಮ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ನಗರದ ವಿವಿಧೆಡೆಗಳಲ್ಲಿರುವ ರಾಮಮಂದಿರಗಳಲ್ಲಿ ಪೂಜೆ ನಡೆಯಿತು.
ಬಿಜೆಪಿ ಮಹಾನಗರ ಪ್ರಧಾನ ಕಾರ್ಯದರ್ಶಿ ಕಿರಣ ಜಾಧವ ನೇತೃತ್ವದಲ್ಲಿ ರಾಮದೇವ ಗಲ್ಲಿಯಲ್ಲಿರುವ ರಾಮಮಂದಿರದಲ್ಲಿ ಕಾರ್ಯಕರ್ತರು ಪೂಜೆ ಸಲ್ಲಿಸಿದರು.

ನಂತರ ರಾಮಮಂದಿರಕ್ಕಾಗಿ ಹೋರಾಟ ನಡೆಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಹರಿಭಾವು ವಜೆ ಅವರ ಮನೆಗೆ ತೆರಳಿ ಸಿಹಿ ಹಂಚಿ ಕೃತಜ್ಞತೆ ಸಲ್ಲಿಸಲಾಯಿತು.
ಕಿರಣ ಜಾಧವ ಅವರ ಜೊತೆಗೆ ಶ್ರೀನಿವಾಸ ಬಿಸನಕೊಪ್ಪ, ಗಜೇಶ ನಂದಗಡಕರ್, ಪ್ರಜ್ಞಾ ಶಿಂಧೆ, ಅಮೃತ ಕಾರೇಕರ್, ಶಿಲ್ಪಾ ಕೇಕರೆ, ಹನುಮಂತ ಕಾಗಲಕರ್ ಮೊದಲಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ