ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಖ್ಯಾತ ಎಲುಬು- ಕೀಲು ಹಾಗೂ ಬೆನ್ನುಮೂಳೆ ತಜ್ಞ ಡಾ. ಆನಂದಕುಮಾರ ಖಟಾವಿ ಅವರು ಪ್ರತಿ ಮಂಗಳವಾರ ಹಾಗೂ ಗುರುವಾರ ಆಸ್ಪತ್ರೆಯ ಎಲುಬು ಕೀಲು ವಿಭಾಗದ ಹೊರರೋಗಿಗಳ ವಿಭಾಗದಲ್ಲಿ ಲಭ್ಯರಿರುತ್ತಾರೆ.
ಸಿ ಆರ್ಮ್ ಮುಖಾಂತರ ಬೆನ್ನಿನ ನರಗಳಿಗೆ ಇಂಜೆಕ್ಷನ್ ನೀಡುವದು, ಬೆನ್ನು ಮೂಳೆಯ ಕಶೇರು ಖಂಡಗಳ ಶಸ್ತ್ರಚಿಕಿತ್ಸೆ, ಬೆನ್ನು ಮೂಳೆಯ ಫ್ಯುಶನ್ ಶಸ್ತ್ರಚಿಕಿತ್ಸೆ, ಕುತ್ತಿಗೆ ಮುಂಭಾಗದ ಶಸ್ತ್ರಚಿಕಿತ್ಸೆ, ಡಿಸ್ಕ್ ಎಂಡೋಸ್ಕೊಪಿಕ್ (ಕೀ ಹೋಲ್) ಸರ್ಜರಿ, ಬೆನ್ನುಮೂಳೆಯ ಮುರಿತದ ಸರ್ಜರಿ, ಸಣ್ಣ ಛೇಧನದ ಮೂಲಕ ಸ್ಕ್ರೂ ಮತ್ತು ರಾಡ್ ಅಳವಡಿಕೆ, ಸ್ಪಾಂಡಿಲೈಸಿಸನ್ ಶಸ್ತ್ರಚಿಕಿತ್ಸೆ, ಬೆನ್ನು ಮೂಳೆಯ ಗಡ್ಡೆಯ ಶಸ್ತ್ರಚಿಕಿತ್ಸೆ ಹಾಗೂ ಬೆನ್ನು ಮೂಳೆಯಲ್ಲಿ ವಿರೂಪತೆ ಬಾಗುವಿಕೆಯ ಶಸ್ತ್ರಚಿಕಿತ್ಸೆ, ಬೆನ್ನುಮೂಳೆಯ ಟಿಬಿ ಸೋಂಕು ಮುಂತಾದ ಚಿಕಿತ್ಸೆ ನೀಡುತ್ತಾರೆ.
ಚಿಕಿತ್ಸೆ ಅವಶ್ಯಕವಿದ್ದವರು ಆಸ್ಪತ್ರೆಗೆ ಮಂಗಳವಾರ ಅಥವಾ ಗುರುವಾರ ಭೇಟಿ ನೀಡಬೇಕು ಎಂದು ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ೮೫೫೦೮೮೭೭೭೭, ೯೫೩೮೭೦೧೪೩೭ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ