ಪ್ರಗತಿ ವಾಹಿನಿ ಸುದ್ದಿ, ನಿಪ್ಪಾಣಿ: ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಜೊತೆಗೆ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಕ್ಷೇತ್ರದ ನಾಗರಿಕರಿಗೆ ಜೊಲ್ಲೆ ಗ್ರುಪ್ ಅಡಿಯಲ್ಲಿ ಕ್ರೀಡೆ ಮತ್ತು ಸಾಂಸ್ಕøತಿಕ ಹಬ್ಬದ ಕಾರ್ಯಕ್ರಮಗಳನ್ನೂ ಉಣಬಡಿಸಲಿದ್ದೇವೆ ಎಂದು ಮ್ಯಾಗ್ನಂಟ್ ಟಫ್ ಕಂಪೆನಿಯ ವ್ಯವಸ್ಥಾಪ ನಿರ್ದೇಶಕ ಬಸವಪ್ರಸಾದ ಜೊಲ್ಲೆ ಹೇಳಿದರು.
ತಮ್ಮ ನಿಪ್ಪಾಣಿಯ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಮುನ್ಸಿಪಲ್ ಪ್ರೌಢಶಾಲೆಯ ಮೈದಾನದಲ್ಲಿ ಆ.19ರಿಂದ 22ರವರೆಗೆ ಆಲ್ ಇಂಡಿಯಾ ಎ ಗ್ರೇಡ್ ಪುರುಷರ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾವಳಿ,
ಸ್ಥಳೀಯ ಶಿವಶಂಕರ ಪಬ್ಲಿಕ್ ಶಾಲೆಯ ಮೈದಾನದಲ್ಲಿ ಜ.28 ಮತ್ತು 29ರಂದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ, ಚಿಕ್ಕೋಡಿಯ ಆರ್.ಡಿ. ಹೈಸ್ಕೂಲ್‍ನಲ್ಲಿ ಜ.29 ಮತ್ತು 30 ರಂದು ಹಾಗೂ ಸ್ಥಳೀಯ ಶಿವಶಂಕರ ಪಬ್ಲಿಕ್ ಶಾಲೆಯ ಮೈದಾನದಲ್ಲಿ ಫೆ.4 ಮತ್ತು 5ರಂದು ವೀರರಾಣಿ ಕಿತ್ತೂರ ಚನ್ನಮ್ಮ ಮೆಗಾ ನಾಟಕದ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಫೆ.14ರಿಂದ 22ರ ವರೆಗೆ ‘ಶಿವಗರ್ಜನಾ’ ಮಹಾನಾಟಕ ಆಯೋಜಿಸಲಾಗಿದೆ ಎಂದರು.
‘ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ 10 ಜನ ಅಂತರರಾಷ್ಟ್ರೀಯ ಮತ್ತು 25 ಜನ ರಾಷ್ಟ್ರೀಯ ಆಟಗಾರರು ಪಾಲ್ಗೊಳ್ಳಲಿದ್ದಾರೆ.
‘ವೀರರಾಣಿ ಕಿತ್ತೂರ ಚನ್ನಮ್ಮ’ ಮೆಗಾನಾಟಕದಲ್ಲಿ ಸುಮಾರು 250 ಕಲಾವಿದರು ಹಾಗೂ 50 ಜನ ತಂತ್ರಜ್ಞರು ಪಾಲ್ಗೊಳ್ಳಲಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳ ಪ್ರಯೋಜನವನ್ನು ಕ್ಷೇತ್ರದ ಜನತೆ ಪಡೆಯಬೇಕು’ ಎಂದು ಅವರು ಕರೆ ನೀಡಿದರು.
ಧಾರವಾಡ ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ ಮಾತನಾಡಿ ‘ಭಾರತೀಯ ರಂಗಭೂಮಿಯಲ್ಲಿ ಅದರಲ್ಲೂ ವಿಶೇಷವಾಗಿ ಕನ್ನಡ ರಂಗಭೂಮಿಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮನ ತ್ಯಾಗ, ಶೌರ್ಯ, ಬಲಿದಾನದ ಗತವೈಭವವನ್ನು ಈ ನಾಟಕದ ಮೂಲಕ ಬಿಂಬಿಸಲಾಗುತ್ತಿದೆ.
ಕಿತ್ತೂರ ಸಂಸ್ಥಾನ ಅಧೀನದ ಹಳ್ಳಿಗಳಿಗೆ ಹೋಗಿ ಅಲ್ಲಿನ ಹಿರಿಯರು, ನಾಗರಿಕರನ್ನು ಮಾತನಾಡಿಸಿ, ಲಂಡನ್ ಗೆಜೆಟ್‍ನಲ್ಲಿರುವ ಅಂಶಗಳನ್ನು ಪರಿಗಣಿಸಿ ಈ ನಾಟಕದಲ್ಲಿ ಚೆನ್ನಮ್ಮಳ ಹೋರಾಟದ ನೈಜ ಕತೆಯನ್ನು ಹೆಣೆದು ಅನಾವರಣಗೊಳಸಲಾಗಿದೆ.
ಇದರಲ್ಲಿ ನಿಜವಾದ ಆನೆಗಳು, ಕುದುರೆಗಳಿವೆ. ಈ ನಾಟಕಕ್ಕೆ ಜೊಲ್ಲೆ ದಂಪತಿಯ ವಿಶೇಷ ಸಹಕಾರ ಲಭಿಸಿದ್ದು ಅವರು ಸರ್ಕಾರದಿಂದ ಅನುದಾನ ಕಲ್ಪಿಸಲು ಪ್ರಯತ್ನಿಸಿದ್ದಾರೆ. ಈ ಮೆಗಾ ನಾಟಕವು ಇಡಿ ರಾಜ್ಯಾದ್ಯಂತ ಪ್ರದರ್ಶಿಸಬೇಕು ಎಂಬುದು ಮುಖ್ಯಮಂತ್ರಿಗಳ ಆಶಯವಾಗಿದೆ ಎಂದರು.
‘ಕೆಲ ಸಾಹಿತಿಗಳು ಇತಿಹಾಸವನ್ನು ತಮಗೆ ಬೇಕಾದಹಾಗೆ ತಿರುಚಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲೆಮರೆಕಾಯಿಯಂತೆ ಸೇವೆ ಸಲ್ಲಿಸಿದವರನ್ನು ಇದರಲ್ಲಿ ಪರಿಚಯಿಸಲಾಗಿದೆ. ಎಲ್ಲರೂ ಕುಟುಂಬ ಸಮೇತ ಈ ಮೆಗಾನಾಟಕವನ್ನು ನೋಡಬೇಕು’ ಎಂದು ಅವರು ವಿನಂತಿಸಿದರು.
ಜೊಲ್ಲೆ ಗ್ರುಪ್‍ನ ಇವೆಂಟ್ ಡೈರೆಕ್ಟರ್ ವಿಜಯ ರಾವುತ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಸ್ಥಾಯಿ ಸಮಿತಿ ಚೇರ್ಮನ್ ರಾಜೇಂದ್ರ ಗುಂದೇಶಾ ಉಪಸ್ಥಿತರಿದ್ದರು.
ಇದೇ ವೇಳೆ ವೀರರಾಣಿ ಕಿತ್ತೂರ ಚೆನ್ನಮ್ಮ ಮೆಗಾ ನಾಟಕದ ಪೋಸ್ಟರ್ ಗಣ್ಯರು ಬಿಡುಗಡೆಗೊಳಿಸಿದರು.
*ಬೆಳಗಾವಿ: 12 ವಿಮಾನಗಳ ಸೇವೆ ಸ್ಥಗಿತ; ಉದ್ಯಮಿಗಳ ಆಕ್ರೋಶ*
https://pragati.taskdun.com/belgaum-airport12-flights-suspendedbusinessmenchamber-of-commerce-hall-meeting/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ