EducationKannada News
ಮೂಡಲಗಿ : ಮಕ್ಕಳಲ್ಲಿ ಕ್ರೀಡಾಭಿಮಾನ ಬೆಳೆಸಬೇಕು – ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ
ಮೂಡಲಗಿ : ಮಕ್ಕಳಲ್ಲಿ ಕ್ರೀಡಾಭಿಮಾನ ಬೆಳೆಸಬೇಕು – ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ
ಮಗುವಿನ ವ್ಯಕ್ತಿತ್ವ ವಿಕಾಸವಾಗಲು ಕ್ರೀಡೆ ಅತ್ಯಂತ ಸಹಕಾರಿಯಾಗಿದೆ. ದೇಹ ಸದೃಢವಾಗಿರಲು ಮಕ್ಕಳಲ್ಲಿ ಕ್ರೀಡಾಭಿಮಾನ ಬೆಳೆಸುವ ಮೂಲಕ ಸದೃಢವಾದ ದೇಹ ಮನಸ್ಸು ಹೊಂದುವಂತೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು.
ಪ್ರಗತಿವಾಹಿನಿ ಸುದ್ದಿ – ಮೂಡಲಗಿ : ಅವರು ಸಮೀಪದ ಪಟಗುಂದಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಮಸಗುಪ್ಪಿ ಕ್ಲಸ್ಟರ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಪ್ರಸಕ್ತ ದಿನಗಳಲ್ಲಿ ಮಕ್ಕಳಲ್ಲಿ ಪೌಷ್ಠಿಕಾಂಶ ಆಹಾರದ ಕೊರತೆಯಿಂದಾಗಿ ಹಾಗೂ ಆರೋಗ್ಯದ ಕುರಿತು ಅರಿವು ಇಲ್ಲದಿರುವದರಿಂದ ರೋಗ ರುಜುನುಗಳು ಹೆಚ್ಚಾಗುತ್ತಿವೆ. ಮಗುವಿಗೆ ಸದೃಢ ಕಾಯ ಹೊಂದಲು ಪೌಷ್ಠಿಕ ಆಹಾರ ವ್ಯಾಯಾಮ ಅತ್ಯಗತ್ಯವಾಗಿ ಬೇಕು. ಮಗುವಿಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಲು ಆಟಗಳ ಬಗ್ಗೆ ಅಭಿರುಚಿ ಹೊಂದುವಂತೆ ಮಾಡಬೇಕು. ಸದೃಢವಾದ ಶರೀರ ಹೊಂದಿದರೆ ಕಲಿಕೆಯಲ್ಲಿ ಉತ್ಸಾಹದಿಂದ ಮಗು ಶಾಲಾ ಪರಿಸರದಲ್ಲಿ ಪಾಲ್ಗೊಳ್ಳುತ್ತದೆ.
ಶಾಲಾ ಪರಿಸರದಲ್ಲಿ ಶಿಕ್ಷಕರು ಮಗುವಿಗೆ ಕಲಿಕೆಯ ಜೊತೆಯಲ್ಲಿ ದೈಹಿಕವಾಗಿ ಸದೃಢರಾಗಲು ವಿವಿಧ ಗ್ರಾಮೀಣ ಸೊಗಡಿನ ಆಟಗಳು ಮಗುವಿನಲ್ಲಿ ಕ್ರೀಡೆಯ ಬಗ್ಗೆ ಸ್ಪರ್ಧಾತ್ಮಕವಾಗಿ ಭಾಗವಹಿಸಲು ಪ್ರೇರೆಪಿಸಬೇಕು. ರಾಜ್ಯ ರಾಷ್ಟ್ರ ಮಟ್ಟದಲ್ಲಿ ವಲಯದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೂಡಲಗಿ ವಲಯದ ಕೀರ್ತಿ ಹೆಚ್ಚಿಸಲು ಪ್ರಯತ್ನ ಮಾಡಬೇಕೆಂದು ಶಿಕ್ಷಕರಿಗೆ ಪಾಲಕರಿಗೆ ಕರೆ ನೀಡಿದರು.
ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಅರ್ಜುನ ಗೊರುಬಾಳ, ಎಸ್.ಡಿ.ಎಮ್.ಸಿ ಅಧ್ಯಕ್ಷ ಸಂಜೀವ ಪೂಜೇರಿ, ಮಾಜಿ ತಾ.ಪಂ ಸದಸ್ಯ ರಾಜು ಕಸ್ತೂರಿ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಬಿ.ಆರ್ ತರಕಾರ, ಗ್ರಾ.ಪಂ ಸದಸ್ಯರಾದ ಚನಗೌಡ ಪಾಟೀಲ, ಬಸವರಾಜ ಪಾಟೀಲ, ಅಶೋಕ ಸರ್ವಿ, ಮಹಾವೀರ ಬೋಳಿ, ಗಣ್ಯರಾದ ತವನಪ್ಪ ಬೋಳಿ, ನಾಯ್ಕಪ್ಪ ನಾಯ್ಕ, ಸುರೇಶ ನಾಯಿಕ, ಶಿವಾನಂದ ಪಾಟೀಲ, ಭೀಮಸಿ ಸರ್ವಿ, ಲಕ್ಷ್ಮಣ ಬಿರಂಜಿ, ಸಾತಪ್ಪ ಉಂದ್ರಿ, ಸಂಘಟನಾ ಕಾರ್ಯದರ್ಶಿ ವಾಯ್.ಡಿ ಜಲ್ಲಿ, ಸಿ.ಆರ್.ಪಿ ಟಿ.ಎಸ್ ಜೋಲಾಪೂರೆ, ಕೆ.ಆರ್ ಡೋಳ್ಳಿ, ಎಲ್.ಎಸ್ ಪೂಜೇರಿ, ಬಿ.ಎಲ್ ಹೊಸಟ್ಟಿ, ಎಸ್ ಬಿ ಮುಗಳಖೋಡ, ಎಸ್.ಕೆ ಭಜಂತ್ರಿ, ಎಸ್ ವಾಯ್ ಸುನಗದ, ಆರ್.ವಿ ಯರಗಟ್ಟಿ, ಎ.ಎ ಪಟವೇಗಾರ, ಜುಬೇರ ಪೆಂಡಾರಿ, ಕೆ.ಎಲ್ ಮೀಶಿ ಹಾಗೂ ಮಸಗುಪ್ಪಿ ಸಮೂಹದ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ