Kannada NewsKarnataka News
ಕೇಶವ ಸ್ಮೃತಿ ಟ್ರಸ್ಟ್ ಗೆ ಬೀರೇಶ್ವರ ಸಂಸ್ಥೆಯಿಂದ ವೈಕುಂಠ ರಥ – ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಜೊಲ್ಲೆ ಉದ್ಯೋಗ ಸಮೂಹದ ಅಂಗ ಸಂಸ್ಥೆಯಾದ ಶ್ರೀ ಬೀರೇಶ್ವರ ಕೋ-ಆಫ್ ಕ್ರೆಡಿಟ್ ಸೊಸೈಟಿ ಲಿ. ಯಕ್ಸಂಬಾ ಇದರ ವತಿಯಿಂದ, ಕೇಶವ ಸ್ಮೃತಿ ಟ್ರಸ್ಟ್ ಗೆ ಜನರ ಸೇವೆಗಾಗಿ ಉಚಿತ ವೈಕುಂಠ ರಥವನ್ನು (Ambulance) ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಸ್ತಾಂತರ ಮಾಡಿದರು.

ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಈ ಭಾಗದಲ್ಲಿ ಮೃತದೇಹಗಳನ್ನು ಸಾಗಿಸಲು ಸಮಸ್ಯೆಯಾಗಿತ್ತು. ಈ ಸಲುವಾಗಿ ಜನರ ಸೇವೆಯಲ್ಲಿ ತೊಡಗಿರುವ ಕೇಶವ ಸ್ಮೃತಿ ಟ್ರಸ್ಟ್ ಗೆ ಈ ವೈಕುಂಠ ರಥವನ್ನು ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷರಾದ ಜಗದೀಶ್ ಕವಟಗಿಮಠ, ಕೇಶವ ಸ್ಮೃತಿ ಟ್ರಸ್ಟ್ ಸದಸ್ಯರು ಹಾಗೂ ಹಿರಿಯ ನ್ಯಾಯವಾದಿಗಳಾದ ಡಿ.ಜಿ.ಗುಂಡೆ, ಚಿಕ್ಕೋಡಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶಾಂಭವಿ ಅಶ್ವತಪುರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸತೀಶ ಅಪ್ಪಾಜಿಗೋಳ, ಅಮೃತ ಕುಲಕರ್ಣಿ, ಬಸವಪ್ರಸಾದ ಜೊಲ್ಲೆ, ಬಿ ಡಿ.ನಸಾಲಾಪುರೆ, ಅಜಯ ಉದೋಶಿ, ಕೇಶವ ಸ್ಮೃತಿ ಟ್ರಸ್ಟ್ ಪದಾಧಿಕಾರಿಗಳು, ಬೀರೇಶ್ವರ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.