ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನ ಮಾಜಿ ಸಿಇಒ ವಾಸುದೇವ ಮಯ್ಯ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ಇದೀಗ ಅದೇ ಬ್ಯಾಂಕ್ ನ ಮತ್ತೊಂದು ಬಹುಕೋಟಿ ವಂಚನೆ ಬೆಳಕಿಗೆ ಬಂದಿದೆ.
233 ಕೋಟಿ ರೂ. ಹಣ ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪದಡಿ ಇದೇ ಬ್ಯಾಂಕ್ನ ಪ್ರಮುಖರ ವಿರುದ್ಧ ಕೇಸ್ ದಾಖಲಾಗಿದೆ ಎಂದು ಬ್ಯಾಂಕ್ ವಿಶೇಷ ಅಧಿಕಾರಿ ಸಂಜಯ್ ಕಲಾಸ್ಕರ್ ಖುದ್ದು ಮಾಹಿತಿ ನೀಡಿದ್ದಾರೆ.
ಶಂಕರಪುರದ ಗುರು ಸೌರ್ವಭೌಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‍ನಲ್ಲಿ ಠೇವಣಿ ಇಡಲಾಗಿದ್ದ 233 ಕೋಟಿ ರೂ. ಹಣ ಅಕ್ರಮವಾಗಿ ವರ್ಗಾವಣೆ ಮಾಡಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಬ್ಯಾಂಕ್ನ ಅಧ್ಯಕ್ಷ ರಾಮಕೃಷ್ಣ, ಉಪಾಧ್ಯಕ್ಷ ಸತ್ಯ ನಾರಾಯಣ, ವಾಸುದೇವ ಮಯ್ಯ ಸೇರಿದಂತೆ ಆಡಳಿತ ಮಂಡಳಿಯ 14 ಸದಸ್ಯರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎನ್ನಲಾಗುತ್ತಿದೆ.
ಇತ್ತೀಚೆಗೆ ವಾಸುದೇವ ಮಯ್ಯ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೆ ಮುನ್ನ ಮರಣ ಪತ್ರದಲ್ಲಿ ತನ್ನಿಂದ ಹಣ ಪಡೆದ ಮತ್ತು ವಂಚನೆಗೀಡಾದವರ ಹೆಸರು ಉಲ್ಲೇಖಿಸಿದ್ದರು. ಈ ಅವ್ಯವಹಾರದ ಪ್ರಕರಣ ಸಿಐಡಿಗೆ ವಹಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ