Latest

*ಕಾಂಗ್ರೆಸ್ ಯೋಜನೆಗೆ ಸೆಡ್ಡು; ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆ, ಚಿಹ್ನೆ ಬಿಡುಗಡೆ ಮಾಡಿದ ಜನಾರ್ಧನ ರೆಡ್ದಿ*

ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ನೂತನ ಪಕ್ಷದ ಮೂಲಕ ಮತ್ತೆ ರಾಜಕೀಯ ಅಖಾಡಕ್ಕೆ ಇಳಿದಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ತಮ್ಮ ಪಕ್ಷದ ಚಿಹ್ನೆ ಹಾಗೂ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.

ಕೊಪ್ಪಳದ ಗಂಗಾವತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚಿಹ್ನೆಯಾಗಿ ಫುಟ್ ಬಾಲ್ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಜನಾರ್ಧನ ರೆಡ್ಡಿ, ನಮ್ಮ ಪಕ್ಷಕ್ಕೆ ನಿರೀಕ್ಷೆಗಿಂತ ಹೆಚ್ಚು ಜನರ ಬೆಂಬಲ ಸಿಗುತ್ತಿದೆ. ಕೇವಲ 90 ದಿನಗಳಲ್ಲಿ 12 ಕ್ಷೇರ್ತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇನೆ. ಇನ್ನೊಂದುವಾರದಲ್ಲಿ 19 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಮಾಡುತ್ತೇನೆ. 30 ಕ್ಷೇತ್ರಗಳಲ್ಲಿ ಕೆಆರ್ ಪಿಪಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು.

ಇದೇ ವೇಳೆ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು.

Home add -Advt
  • ಪ್ರತಿ ಮನೆಗೆ 250 ಯೂನಿಟ್ ಉಚಿತ ವಿದ್ಯುತ್
  • 5 ಎಕರೆಗೂ ಕಡಿಮೆ ಭೂಮಿ ಇರುವ ರೈತರಿಗೆ 15 ಸಾವಿರ ನೆರವು
  • ಎಸ್ಸಿ ಎಸ್ ಟಿಗಳಿಗೆ ಉಚಿತ ನಿವೇಶನ
  • ರೈತರಿಗೆ ಬಡ್ದಿ ರಹಿತ ಸಾಲ
  • ಮಹಿಳೆಯರ ಭದ್ರತೆಗಾಗಿ ಮಹಿಳಾ ತಂಡ ರಚನೆ
  • ಹೆಣ್ಣು ಮಕ್ಕಳ ಹೆಸರಲ್ಲಿ 2 BHK ಮನೆ
  • ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ವೇತನ
  • ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ
  • ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ 1000 ರೂ ವೇತನ ಹೆಚ್ಚಳ
  • ಆರ್ಥಿಕ ಸಂಕಷ್ಟದಲ್ಲಿರುವ ಮಕ್ಕಳಿಗೆ ಉಚಿತ ಶಿಕ್ಷಣದ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಿದ್ದಾರೆ.

Related Articles

Back to top button