Belagavi NewsBelgaum NewsKannada NewsKarnataka NewsLatestPolitics

*ಒಂದೆ ದಿನದಲ್ಲಿ 9024 ಟನ್ ಕಬ್ಬು ನುರಿಸಿ ದಾಖಲೆ ಬರೆದ ಶ್ರೀ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ*

ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ‘ಪ್ರಸಕ್ತ ಕಬ್ಬು ನುರಿಸುವ ಹಂಗಾಮಿನ ಕಳೆದ ೨೩ ದಿನಗಳಲ್ಲಿ ೧೫೯೦೭೮ ಟನ್ ಕಬ್ಬು ನುರಿಸಲಾಗಿದ್ದು, ಇಂದಿನ ದಾಖಲೆಯನುಸಾರ ೯೦೨೪ ಟನ್ ಕಬ್ಬು ನುರಿಸಲಾಗಿದೆ. ಇದು ಕಾರ್ಖಾನೆಯ ಇತಿಹಾಸದಲ್ಲಿ ಇಲ್ಲಿಯವರೆಗಿನ ಸರ್ವಕಾಲಿಕ ದಾಖಲೆಯಾಗಿದೆ’ ಎಂದು ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲಗೊಂಡಾ ಪಾಟೀಲ ಹೇಳಿದರು.

ಕಾರ್ಖಾನೆಯಲ್ಲಿ ಭಾನುವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮೊದಲು ನಮ್ಮ ಭಾಗದ ಕಬ್ಬಿಗೆ ಆದ್ಯತೆ ನೀಲಡಾಗುವುದು. ನಂತರ ಹೊರಗಡೆಯ ಕಬ್ಬು ಪಡೆಯಲಾಗುವುದು. ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗಾಗಿ ೧.೦೬ ಲಕ್ಷ ಎಕರೆಯಷ್ಟು ಕಬ್ಬು ಬೆಳೆಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ನಮ್ಮ ಭಾಗದ ಹಾಗೂ ಹೊರಗಿನ ಭಾಗದ ರೈತರ ಸ್ಪಂದನೆ ನಮ್ಮ ಕಾರ್ಖಾನೆಗೆ ಉತ್ತಮ ರೀತಿಯಲ್ಲಿ ಆಗುತ್ತಿದೆ’ ಎಂದರು.

ಹಣ ಸಂದಾಯ: ‘ನ.೧ ರಿಂದ ೧೫ರ ವರೆಗೆ ಕಬ್ಬು ಪೂರೈಸಿದ ರೈತರ ಖಾತೆಯಲ್ಲಿ ೩೧.೬೭ ಕೋಟಿ ರೂ. ಅವರವರ ಖಾತೆಗಳಿಗೆ ಜಮಾ ಮಾಡಲಾಗಿದೆ. ಈ ಮೊದಲು ಅ.೩೧ರ ವರೆಗೆ ಕಬ್ಬು ಪೂರೈಸಿದ ರೈತರ ಖಾತೆಗೆ ೮.೨೫ ಕೋಟಿ ಹಣ ಜಮಾ ಮಾಡಲಾಗಿತ್ತು’ ಎಂದರು.
ವಿದ್ಯುತ್: ‘ಪ್ರಸಕ್ತ ಹಂಗಾಮಿನಲ್ಲಿ ೭೮೭೭೨೦೦ ಯುನಿಟ್ ವಿದ್ಯುತ್ ಉತ್ಪಾದಿಸಲಾಗಿದೆ. ಕೇವಲ ೨೩ ದಿನಗಳಲ್ಲಿ ಉತ್ಪಾದಿಸಲಾದ ಈ ವಿದ್ಯುತ್‌ನಲ್ಲಿ ಹೆಸ್ಕಾಂಗೆ ೩೫.೯೯ ಲಕ್ಷ ಯುನಿಟ್ ವಿದ್ಯುತ್ ಮಾರಾಟ ಮಾಡಲಾಗಿದೆ’ ಎಂದರು.

Home add -Advt

ಸದಸ್ಯರ ಮಕ್ಕಳಿಗೆ ಆರ್ಥಿಕ ಸಹಾಯ: ‘ಸರ್ವ ಸದಸ್ಯರ ಸಹಕಾರದಿಂದ ಚುನಾವಣೆಯು ಅವಿರೋಧವಾಗಿ ನಡೆದು ಚುನಾವಣಾ ವೆಚ್ಚ ಉಳಿದಿತ್ತು. ಇದನ್ನು ಕಾರ್ಖಾನೆಯ ಮಾರ್ಗದರ್ಶಕರಾದ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆಯವರ ಅಭಿಲಾಷೆಯಂತೆ ಸದಸ್ಯರ ಮಕ್ಕಳಿಗೆ ತಾಂತ್ರಿಕ ಹಾಗೂ ಉನ್ನತ ಶಿಕ್ಷಣಕ್ಕಾಗಿ ವಿನಿಯೋಗಿಸಲು ತೀರ್ಮಾನಿಸಲಾಗಿದೆ.
ಅರ್ಹ ಸದಸ್ಯರು ತಮ್ಮ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಕಾರ್ಖಾನೆಯಲ್ಲಿ ವಿವರಗಳೊಂದಿಗೆ ಅರ್ಜಿ ಸಲ್ಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪವನಕುಮಾರ ಪಾಟೀಲ, ಪ್ರಧಾನ ವ್ಯವಸ್ಥಾಪಕ ಶೆಟ್ಟೆ, ಕಛೇರಿ ಅಧೀಕ್ಷಕ ರಾಜೇಂದ್ರ ಖರಾಬೆ, ಸಿದ್ಧು ನರಾಟೆ, ಮೊದಲಾದವರು ಸಹಿತ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.


Related Articles

Back to top button