Belagavi NewsBelgaum NewsKannada NewsKarnataka News

*ಹುಣಶ್ಯಾಳ ಪಿಜಿ ಕೈವಲ್ಯಾಶ್ರಮದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಜಾತ್ರೆ: ಹುಕ್ಕೇರಿ ಶ್ರೀಗಳು*

ಪ್ರಗತಿವಾಹಿನಿ ಸುದ್ದಿ: ಸಮೀಪದ ಹುಣಶ್ಯಾಳ ಪಿಜಿ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ಪೀಠಾಧಿಪತಿಗಳಾದ ನಿಜವರಿದ ಸಂತ, ಸದು ಹೃದಯವಂತ, ಸಾಹಿತ್ಯ ಶ್ರೀಮಂತ ಪರಮ ಪೂಜ್ಯ ಶ್ರೀ ನಿಜಗುಣ ದೇವ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ೨೭ನೇ ಸತ್ಸಂಗ ಸಂಭ್ರಮ ಮತ್ತು ಅಪ್ಪನ ಜಾತ್ರೆ ಕಾರ್ಯಕ್ರಮವು ೨೦೨೬ ಜನೇವರಿ ೧ ರಿಂದ ೩ರವರೆಗೆ ವಿಜೃಂಭನೆಯಿಂದ ಜರುಗಲಿದ್ದು ನಾಡಿನ ಜಗದ್ಗುರುಗಳು, ಮಹಾತ್ಮರು, ಗಣ್ಯರು ಆಗಮಿಸಲಿದ್ದಾರೆ ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ತಿಳಿಸಿದರು.

ಅವರು ಸೋಮವಾರದಂದು ಹುಣಶ್ಯಾಳ ಪಿಜಿ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. 

ದಿ.೧ರಂದು ಶ್ರೀ ಸಿದ್ಧಲಿಂಗ ಯತಿರಾಜರ, ಶ್ರೀ ಶಾಂಭವಿಮಾತೆಯ, ಶ್ರೀ ಸಿದ್ಧಲಿಂಗ ಮಹಾರಾಜರ ಮೂರ್ತಿಗಳಿಗೆ ರುದ್ರಾಭಿಷೇಕ ನಂತರ ‘ಸ್ವಾಂಸ್ಕೃತಿಕ ಸಿರಿ’ ಕಾರ್ಯಕ್ರಮ ಜರುಗಲಿದೆ. ಸಂಜೆ ೪ ಗಂಟೆಗೆ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ: ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರನ್ನು ಶೃಂಗಾರ ರಥದಲ್ಲಿ ಸಹಸ್ರ ಪೂರ್ಣ ಕುಂಭದೊಂದಿಗೆ ಮಹಾತ್ಮರ ಭವ್ಯ ಸ್ವಾಗತ ಮೆರವಣಿಗೆ  ಹಾಗೂ ಶ್ರೀ ಸಿದ್ಧಲಿಂಗ ಯತಿರಾಜರ ತೊಟ್ಟಿಲೋತ್ಸವ ಜರುಗಲಿದ್ದು, ಅನೇಕ ಮಹಾತ್ಮರು,ಗಣ್ಯರು ಉಪಸ್ಥಿತರಿರುವರು. ನಂತರ ಸನ್ಮಾನ ಕಾರ್ಯಕ್ರಮ ಹಾಗೂ ಮಹಾಪ್ರಸಾದ ಜರುಗಲಿದೆ.

ದಿ.೨ರಂದು ತತ್ವಾಮೃತ ಕಾರ್ಯಕ್ರಮದಲ್ಲಿ ಮಹಾತ್ಮರ ಪ್ರವಚನ ಸುಧೆ,ಪೂಜ್ಯರ ತುಲಾಭಾರ ಸೇವೆ ನಂತರ “ಕನ್ನಡ ಕೋಗಿಲೆ” ಖ್ಯಾತಿಯ ಕುಮಾರಿ ಮಹನ್ಯಾ ಗುರು ಪಾಟೀಲ ಇವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ಅನೇಕ ಮಹಾತ್ಮರು,ಗಣ್ಯರು ಉಪಸ್ಥಿತರಿರುವರು.

Home add -Advt

ಸಂಜೆ ೬ ಗಂಟೆಗೆ ತತ್ವಾಮೃತ ಕಾರ್ಯಕ್ರಮ ಹಾಗೂ  ಪೂಜ್ಯ ಶ್ರೀ ನಿಜಗುಣ ದೇವ ಮಹಾಸ್ವಾಮಿಜಿಯವರ ತೂಗುಯ್ಯಾಲೆ ಶೃಂಗಾರ ಕಿರೀಟ ಮಹಾಪೂಜೆ ಜರುಗಲಿದೆ. ದಿ.೩ ರಂದು ಮುಂಜಾನೆ ೧೦ ಗಂಟೆಗೆ ತತ್ವಾಮೃತ ಕಾರ್ಯಕ್ರಮ ಹಾಗೂ ಪೂಜ್ಯ ಶ್ರೀ ನಿಜಗುಣ ದೇವ ಮಹಾಸ್ವಾಮಿಜಿಯವರಿಗೆ ಕಿರೀಟ ಧಾರಣೆ ಮತ್ತು ತುಲಾಭಾರ ಸೇವೆ ಜರುಗಲಿದೆ. ಸಂಜೆ ೪ ಗಂಟೆಗೆ ಶ್ರೀ ಸಿದ್ಧಲಿಂಗೇಶ್ವರ ಭವ್ಯ ರಥೋತ್ಸವ ರಾತ್ರಿ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀಮಠದ ಪೂಜ್ಯ ಶ್ರೀ ನಿಜಗುಣ ದೇವ ಮಹಾಸ್ವಾಮಿಗಳು, ತೊಂಡಿಕಟ್ಟಿಯ ಅಭಿನವ ವೆಂಕಟೇಶ ಮಹಾರಾಜರು, ಬೀದರಿನ ಗಣೇಶ ಮಹಾರಾಜರು ಸೇರಿದಂತೆ ಶ್ರೀಮಠದ ಭಕ್ತರು ಇದ್ದರು.

Related Articles

Back to top button