GIT add 2024-1
Laxmi Tai add
Beereshwara 33

ಬೆಟಗೇರಿ ಗ್ರಾಮದ ಶ್ರೀರಾಮ ಚಂದರಗಿ ಲೆಪ್ಟಿನೆಂಟ್ ಆಗಿ ಆಯ್ಕೆ

Anvekar 3
Cancer Hospital 2


ಮಾ.೨೩ರಂದು ಡಾ.ಕೃಷ್ಣಶರ್ಮ ಜಾಗ್ರತ ವೇದಿಕೆ ವತಿಯಿಂದ ಸತ್ಕಾರ, ಗಣ್ಯಮಾನ್ಯರ ಉಪಸ್ಥಿತಿ

ಪ್ರಗತಿವಾಹಿನಿ ಸುದ್ದಿ, ಬೆಟಗೇರಿ : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀರಾಮ ಶಂಕರ ಚಂದರಗಿ ಅವರು ಭಾರತೀಯ ಸೈನಿಕ ಸೇನೆಯಲ್ಲಿ ಲೆಪ್ಟಿನೆಂಟ ಆಗಿ ಆಯ್ಕೆಯಾದ ಪ್ರಯುಕ್ತ ಸ್ಥಳೀಯ ಡಾ.ಕೃಷ್ಣಶರ್ಮ ಜಾಗ್ರತ ವೇದಿಕೆ ವತಿಯಿಂದ ಸತ್ಕಾರ ಸಮಾರಂಭ ಬೆಟಗೇರಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಮಾ.೨೩ರಂದು ಮುಂಜಾನೆ ೧೦ ಗಂಟೆಗೆ ನಡೆಯಲಿದೆ.

Emergency Service

ಸ್ಥಳೀಯ ಡಾ.ಕೃಷ್ಣಶರ್ಮ ಜಾಗ್ರತ ವೇದಿಕೆ ಅಧ್ಯಕ್ಷ ಲಕ್ಕಪ್ಪ ಮೆಳೆಣ್ಣವರ ಅಧ್ಯಕ್ಷತೆ ವಹಿಸಲಿದ್ದು, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ತೇಜಸ್ವಿನಿ ನೀಲಣ್ಣವರ, ಬೆಳಗಾವಿ ಪ.ಪೂ.ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಈರಪ್ಪ ದೇಯಣ್ಣವರ, ಮುಂಡಗೋಡದ ವಿಶ್ರಾಂತ ಉಪನ್ಯಾಸಕ ಅರ್ಜುನ ಹೊಂಗಲ, ಸ್ಥಳೀಯ ನಿವೃತ್ತ ಗ್ರಾಮಲೆಕ್ಕಗ ಪಿ.ಕೆ.ನೀಲಣ್ಣವರ, ರಂಗಭೂಮಿ ಹಿರಿಯ ಕಲಾವಿದ ಈಶ್ವರಚಂದ್ರ ಬೆಟಗೇರಿ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹರ, ಗುರು, ಚರಮೂರ್ತಿಗಳು, ಗಣ್ಯರು, ಮುಖಂಡರು, ಹಿರಿಯ ನಾಗರಿಕರು, ವಿವಿಧ ಸಂಘ, ಸಂಸ್ಥೆಗಳ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸದಸ್ಯರು, ಡಾ.ಕೃಷ್ಣಶರ್ಮ ಜಾಗ್ರತ ವೇದಿಕೆ ಪದಾಧಿಕಾರಿಗಳು, ಸದಸ್ಯರು, ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಸ್ಥಳೀಯ ಡಾ.ಕೃಷ್ಣಶರ್ಮ ಜಾಗ್ರತ ವೇದಿಕೆ ಗೌರವ ಕಾರ್ಯದರ್ಶಿ ನಾಗಪ್ಪ ಮುರಗೋಡ ಪ್ರಕಟನೆಗೆ ತಿಳಿಸಿದ್ದಾರೆ.

Bottom Add3
Bottom Ad 2