Kannada NewsKarnataka NewsLatest

SSLC : 625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅಭಿನಂದಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪ್ರಸಕ್ತ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದುಕೊಂಡ ಜಿಲ್ಲೆಯ 10 ವಿದ್ಯಾರ್ಥಿಗಳನ್ನು ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಮ್ಮ ಕಚೇರಿಯಲ್ಲಿ ಸತ್ಕರಿಸಿ ಅಭಿನಂದಿಸಿದರು.

ಬೆಳಗಾವಿ ದಕ್ಷಿಣ ಶೈಕ್ಷಣ ಕ ಜಿಲ್ಲೆಯ 6 ಹಾಗೂ ಚಿಕ್ಕೋಡಿ ಶೈಕ್ಷಣ ಕ ಜಿಲ್ಲೆಯ 4 ವಿದ್ಯಾರ್ಥಿಗಳ ಶೈಕ್ಷಣ ಕ ಸಾಧನೆಯನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಶ್ಲಾಘಿಸಿದ್ದಾರೆ.

ಬೆಳಗಾವಿ ದಕ್ಷಿಣ ಶೈಕ್ಷಣಿಕ ಜಿಲ್ಲೆಯ ವಿದ್ಯಾರ್ಥಿಗಳು:

ಬೆಳಗಾವಿ ನಗರದ ತಿಳಕವಾಡಿಯಲ್ಲಿರುವ ಹೆರವಾಡಕರ ಆಂಗ್ಲ ಪ್ರೌಢಶಾಲೆಯ ಅಮೋಘ ಕೌಶಿಕ್, ಕೆಎಲ್‌ಎಸ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನ ವೆಂಕಟೇಶ್ ಡೊಂಗರೆ, ಖಾನಾಪೂರದ ನಂದಗಡದಲ್ಲಿರುವ ಸಂಗೊಳ್ಳಿ ರಾಯಣ್ಣ ಮೆಮೊರಿಯಲ್ ವಸತಿ ಶಾಲೆಯ ಸ್ವಾತಿ ತೋಲಗಿ, ರಾಮದುರ್ಗದ ಕೆಂಬ್ರಿಡ್ಜ್ ಇಂಗ್ಲಿಷ್ ಮಾಧ್ಯಮ ಹೈ ಸ್ಕೂಲ್‌ನ ಆದರ್ಶ ಹಾಲಭಾವಿ, ಹಾಗೂ ರಾಮದುರ್ಗ ಲಕ್ಷೀ ನಗರದ ಬಸವೇಶ್ವರ ಇಂಗ್ಲಿಷ್ ಮಾಧ್ಯಮ ಹೈಸ್ಕೂಲ್‌ನ ರೋಹಿಣ ಗೌಡರ, ಮತ್ತು ಸೌದತ್ತಿಯ ಸತ್ತಿಗೇರಿಯಲ್ಲಿರವ ಕರ್ನಾಟಕ ಪಬ್ಲಿಕ್ ಶಾಲೆಯ ಸಹನಾ ರಾಯರ್.

ಚಿಕ್ಕೋಡಿ ಶೈಕ್ಷಣ ಕ ಜಿಲ್ಲೆಯ ವಿದ್ಯಾರ್ಥಿಗಳು:

ರಾಯಬಾಗ ತಾಲೂಕಿನ ಹಾರೂಗೇರಿಯ ಭಗವಾನ್ ಆಂಗ್ಲ ಮಾಧ್ಯಮ ಶಾಲೆಯ ಸೃಷ್ಠಿ ಪತ್ತಾರ, ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾದಲ್ಲಿರುವ ಮೊರಾರ್ಜಿ ವಸತಿ ಶಾಲೆಯ ಶಂಭು ಖನೈ, ನಿಪ್ಪಾಣ ತಾಲೂಕಿನ ಭೋಜದಲ್ಲಿರುವ ನ್ಯೂ ಸೆಕೆಂಡರಿ ಸ್ಕೂಲ್‌ನ ವರ್ಷಾ ಪಾಟೀಲ, ಅಥಣಿಯ ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿವೇಕಾನಂದ ಹೊನ್ನಾಳಿ

ವಿದ್ಯೆಯಿಂದಲೇ ಬದುಕು ಬೆಳಕಾಗುವುದಕ್ಕೆ ಸಾಧ್ಯವಿದೆ. ವಿದ್ಯೆ, ವಿನಯ, ಶ್ರದ್ಧೆ ವಿದ್ಯಾರ್ಥಿಗಳನ್ನು ಸಮರ್ಥ ನಾಗರಿಕನನ್ನಾಗಿ ರೂಪಿಸುವಲ್ಲಿ ಪ್ರಮುಖವಾಗಿವೆ ಎಂದು ವಿದ್ಯಾರ್ಥಿಗಳ ಮುಂದಿನ ಶೈಕ್ಷಣ ಕ ಪ್ರಗತಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಡಿಡಿಪಿಐ ಬಸವರಾಜ ನಾಲತವಾಡ, ವಿದ್ಯಾರ್ಥಿಗಳ ಪೋಷಕರು, ಶಾಲೆಯ ಶಿಕ್ಷಕರು, ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

Pragativahini Exclusive – ಕೆನಡಾ ಸಂಸದ ಚಂದ್ರ ಆರ್ಯ ಬೆಳಗಾವಿಯ ಅಳಿಯ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button