
ಪ್ರಗತಿವಾಹಿನಿ ಸುದ್ದಿ; ಹುಕ್ಕೇರಿ: ಹುಕ್ಕೇರಿ ತಾಲೂಕಿನ ಕೇಸ್ತಿ ಸರಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಮಿದ್ದತ್ ಅಬ್ದುಲರಜಾಕ್ ಸನದಿ ಇವಳ ತಂದೆ ಅಬ್ದುಲರಜಾಕ್ ಸನದಿ ರಾತ್ರಿ 2.30ಕ್ಕೆ ಹೃದಯಾಘಾತದಿಂದ ನಿಧನ ಹೊಂದಿದ್ದು, ದುಃಖದಲ್ಲಿರುವ ವಿದ್ಯಾರ್ಥಿನಿಯನ್ನು ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಮನವೊಲಿಸಿ, ಇಂದು ಪರೀಕ್ಷಗೆ ಹಾಜರಾಗುವಂತೆ ಮಾಡಿದರು.
ವಿಷಯ ತಿಳಿದ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ಅವರು ಎಸ್.ಜೆ.ಡಿ. ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಆ ವಿದ್ಯಾರ್ಥಿನಿಗೆ ಧೈರ್ಯ ಹೇಳಿ ಪರೀಕ್ಷೆ ಬರೆಯಲು ಪ್ರೋತ್ಸಾಹಿಸಿದರು.
ಬಿಸಿಯೂಟ ಅಧಿಕಾರಿಗಳಾದ ಎಸ್.ಪಿ.ಹಲಕಿ, ಪಿ.ಡಿ.ಪಾಟೀಲ, ಶಿವಾನಂದ ಗುಂಡಾಳಿ, ಕೇಂದ್ರದ ಮುಖ್ಯ ಆಧೀಕ್ಷಕ ಪಿ.ಪಿ.ಖೋತ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ