ಎಸ್.ಎಸ್.ಎಲ್.ಸಿ ಅಂಕದಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎಸ್.ಎಸ್.ಎಲ್.ಸಿ ಪರೀಕ್ಷೆಯ ಅಂಕದ ವಿಚಾರದಲ್ಲಿ ಶಿಕ್ಷಣ ಇಲಾಖೆ ತೆಗೆದುಕೊಂಡಿರುವ ನಿರ್ಧಾರದಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಈ ಕುರಿತು ಶಿಕ್ಷಕಿಯೊಬ್ಬರು ಪ್ರಗತಿವಾಹಿನಿಗೆ ಕಳಿಸಿರುವ ಆಡಿಯೋ ಸಂದೇಶ ಎಲ್ಲವನ್ನೂ ಬಿಚ್ಚಿಟ್ಟಿದೆ. (ಸಂಪೂರ್ಣ ಆಡಿಯೋ ಕೇಳಿ)
ಆಡಿಯೋ ನಂ.1 –
ಆಡಿಯೋ ನಂ.2 –
ಅದರ ಸಂಕ್ಷಿಪ್ತ ವಿವರ ಇಲ್ಲಿದೆ –
ಇಂದು ನಡೆದ ಪರೀಕ್ಷೆಯಲ್ಲಿ 40 ಅಂಕಗಳ ಒಂದು ಪೇಪರ್ ಅಂದರೆ 3 ಕೋರ್ ಸಬ್ಜಕ್ಟ್ ಗಳನ್ನು ಒಳಗೊಂಡ ಒಂದು ಪೇಪರ್. ಅದನ್ನು 80 ಮಾರ್ಕ್ಸ್ ಗೆ ಕನ್ವರ್ಟ್ ಮಾಡಲಾಗುತ್ತಿದ್ದು + 20 ಮಾರ್ಕ್ಸ್ ಇಂಟರ್ನಲ್ ಆಗಿರುತ್ತದೆ. 1 ಉತ್ತರ ತಪ್ಪಾಗಿದ್ದರೂ ವಿದ್ಯಾರ್ಥಿಗಳು 2 ಅಂಕಗಳನ್ನು ಕಳೆದುಕೊಳ್ಳುತ್ತಾರೆ. ಮೂರು ಕೋರ್ ಸಬ್ಜಕ್ಟ್ ಗಳನ್ನು ಒಂದೇ ಪೇಪರ್ ನಲ್ಲಿ ಬರೆದಿರುವುದರ ಜೊತೆಗೆ ಒಂದು ಉತ್ತರ ತಪ್ಪಾದರೂ 2 ಅಂಕಗಳನ್ನು ಕಳೆದುಕೊಳ್ಳುತ್ತಿದ್ದು, ವಿದ್ಯಾರ್ಥಿಗಳಿಗೆ ಬೇಸರತರಿಸಲಿದೆ.
ಅದೇ ರೀತಿ ಪ್ರಥಮ ವಿಷಯ ಪೇಪರ್ ಗೆ 125 ಮಾರ್ಕ್ಸ್ ಇದ್ದು, 25 ಅಂಕಗಳ ಇಂಟರ್ನಲ್ ಹಾಗೂ 100 ಅಂಕಗಳ ಉತ್ತರ ಬರೆಯಬೇಕು. ಅದರಲ್ಲಿ 40 ಅಂಕಗಳಿಗೆ ಉತ್ತರಿಸಬೇಕು. 40 ಅಂಕಗಳನ್ನು 100 ಮಾರ್ಕ್ಸ್ ಗೆ ಕನ್ವರ್ಟ್ ಮಾಡಿದಾಗ ಪ್ರಥಮ ಭಾಷೆಗೆ ಒಂದು ಉತ್ತರ ತಪ್ಪಾದರೂ 2.5 ಅಂಕದಂತೆ ವಿದ್ಯಾರ್ಥಿ ಅಂಕಗಳನ್ನು ಕಳೆದುಕೊಳ್ಳುತ್ತಾನೆ. 40 ಅಂಕದ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಒಂದು ವೇಳೆ 5 ತಪ್ಪು ಉತ್ತರ ಬರೆದರೆ 10 ಅಂಕಗಳನ್ನು ಕಳೆದುಕೊಳ್ಳುತ್ತಾರೆ. ಒಂದೊಮ್ಮೆ 10 ತಪ್ಪುಗಳನ್ನು ಬರೆದಲ್ಲಿ 20 ಅಂಕಗಳನ್ನು ಕಳೆದುಕೊಳ್ಳುತ್ತಾರೆ. ಇಂಟರ್ನಲ್ ಅಂಕಕ್ಕಿಂತಲೂ ಹೆಚ್ಚು ಮಾರ್ಕ್ಸ್ ಗಳನ್ನು ಕಳೆದುಕೊಳ್ಳುವ ಸ್ಥಿತಿ ಇದೆ ಇದು ವಿದ್ಯಾರ್ಥಿಗಳಿಗೆ ನೋವು ತಂದಿದೆ ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.
ಕೋವಿಡ್ ನಂತಹ ಸಂಕಷ್ಟದ ಸಂದರ್ಭದಲ್ಲಿಯೂ ವಿದ್ಯಾರ್ಥಿಗಳು ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಎದುರಿಸುತ್ತಿದ್ದು, ಆದರೆ ಅಂಕದ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಅವರ ಮಾನಸಿಕ ಅಸಮತೋಲನಕ್ಕೆ ಸರ್ಕಾರ ಕಾರಣವಾಗುತ್ತಿದೆ ಈ ಬಗ್ಗೆ ಸರ್ಕಾರ ತಕ್ಷಣ ಗಮನಹರಿಸಬೇಕು ಎಂದು ಶಿಕ್ಷಕರು ಆಗ್ರಹಿಸಿದ್ದಾರೆ.
ಹಾಗಾಗಿ ಅಂಕಗಳನ್ನು ಕನ್ವರ್ಟ್ ಮಾಡದೆ ಇರುವ ಅಂಕಗಳನ್ನು ಹಾಗೆಯೇ ಕೊಡುವುದು ಎಲ್ಲ ದೃಷ್ಟಿಯಿಂದ ವಿಹಿತ ಎನ್ನುವುದು ಶಿಕ್ಷಕರ ಸಲಹೆ. (ಆಡಿಯೋದಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ)
ನಾಳೆ ದ್ವಿತೀಯ ಪಿಯು ಫಲಿತಾಂಶ ಪ್ರಕಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ