Kannada NewsKarnataka NewsLatest

ಶಿಕ್ಷಕ ಮನಸ್ಸು ಮಾಡಿದರೆ ಪ್ರತಿಯೊಬ್ಬ ವಿದ್ಯಾರ್ಥಿ ಉತ್ತೀರ್ಣ : ಬಿಇಒ ವೈ.ಜೆ.ಭಜಂತ್ರಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮನಸ್ಸಿದ್ದಲ್ಲಿ ಮಾರ್ಗ, ಶಿಕ್ಷಕರು ಮನಸ್ಸು ಮಾಡಿದರೆ ಪ್ರತಿಯೊಬ್ಬ ವಿದ್ಯಾರ್ಥಿ ಎಸ್.ಎಸ್. ಎಲ್. ಸಿ ಪರಿಕ್ಷೆಯಲ್ಲಿ ಪಾಸಾಗಲು ಸಾಧ್ಯ ಎಂದು ಬೆಳಗಾವಿ ನಗರ ಬಿಇಓ ವಾಯ್ ಜೆ ಭಜಂತ್ರಿ ಹೇಳಿದ್ದಾರೆ.

ಬೆಳಗಾವಿ ಶಿಕ್ಷಣ ಸಂಸ್ಥೆಯ ಶ್ರೀಮತಿ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಎಸ್. ಎಸ್.ಎಲ್.ಸಿ ಫಲಿತಾಂಶದ ಪರಿಶೀಲನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಂದು ಪ್ರೌಢಶಾಲೆಯ ಮುಖ್ಯೊಪಾಧ್ಯಾಯರು ಹಾಗೂ ಆಯಾ ಶಾಲೆಯ ಶಿಕ್ಷಕರು ಮನಸ್ಸು ಮಾಡಿದರೆ ಪ್ರತಿಯೊಂದು ಎಸ್. ಎಸ್.ಎಲ್.ಸಿ ವಿದ್ಯಾರ್ಥಿ ಪರಿಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಎಸ್. ಎಸ್.ಎಲ್.ಸಿ ಫಲಿತಾಂಶ ಆಯಾ ಶಾಲೆಯ ಶಿಕ್ಷಕರ ಪ್ರಾಮಾಣಿಕ ಪ್ರಯತ್ನದ ಮೇಲೆ ಅವಲಂಭಿಸಿದೆ. ಆದಕಾರಣ ಮುಖ್ಯೊಪಾಧ್ಯಾಯರು ತಮ್ಮ ಶಾಲೆಯ ವಿಷಯ ಶಿಕ್ಷಕರಿಗೆ ಮನವರಿಕೆ ಮಾಡಿ ಪ್ರತಿಯೊಂದು ಶಾಲೆಯ ಫಲಿತಾಂಶ ಪ್ರತಿಷತ ನೂರರಷ್ಟು ಗುರಿ ಇಟ್ಟುಕೊಂಡು ಪ್ರಯತ್ನ ಮಾಡಬೇಕೆಂದು  ಅವರು ಮಾರ್ಗದರ್ಶನ ಮಾಡಿದರು.

ಪ್ರತಿಯೊಂದು ಮುಖ್ಯೊಪಾಧ್ಯಾಯರು ವಾರಕ್ಕೆ ೧೨ ಅವಧಿ ಕಡ್ಡಾಯವಾಗಿ ಭೋದಿಸಬೇಕು. ಪಾಠ ಟಿಪ್ಪಣಿ ಹಾಗೂ ಪಾಠೋಪಕರಣದ ಸದ್ದಬಳಕೆಯ ಬಗ್ಗೆ ಮುಖ್ಯೊಪಾಧ್ಯಾಯರಿಗೆ ಸಲಹೆ ನೀಡಿದರು.

ಈ ಕಾರ್ಯಕ್ರಮಕ್ಕೆ ಬೆಳಗಾವಿ ನಗರದ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಎಲ್ಲಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

ಉಪನಿರ್ದೆಶಕರ ಕಾರ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ಜಿಲ್ಲೆಯ ಎಸ್. ಎಸ್.ಎಲ್.ಸಿ ನೋಡಲ್ ಅಧಿಕಾರಿಗಳಾದ ಎನ್.ಆರ್.ಪಾಟೀಲ ಉಪಸ್ಥಿತರಿದ್ದು ಜೂನ್ ೨೦೨೧ರಲ್ಲಿ ನಡೆಯಲಿರುವ ಬೆಳಗಾವಿ ಜಿಲ್ಲೆಯ ಎಸ್. ಎಸ್.ಎಲ್.ಸಿ ಫಲಿತಾಂಶ ರಾಜ್ಯಕ್ಕೆ ಮಾದರಿ ಆಗುವ ರೀತಿ ಪ್ರಯತ್ನ ಮಾಡಬೇಕೆಂದು ಮಾರ್ಗದರ್ಶನ ನೀಡಿದರು.

ಬಾಶೀಬಾನ ಹಾಯ್‌ಸ್ಕೂಲಿನ ಮುಖ್ಯೊಪಾಧ್ಯಾಯರಾದ ಕೆ.ಕೆ.ಚಾಂದವಾಲೆ ಇವರು ಸಾಪ್ತಾಹಿಕ ಪರಿಕ್ಷೆಯ ಆಗು ಹೋಗುವ ಬಗ್ಗೆ ಮಾಹಿತಿ ನೀಡಿದರು, ಭರತೇಶ ಪ್ರೌಢಶಾಲೆಯ ಮುಖ್ಯೊಪಾಧ್ಯಾಯರಾದ ಎಸ್.ಎನ್.ಅಕ್ಕಿ ಇವರು ಬೆಸಲಾಯನ್ ಪರಿಕ್ಷೆಯ ಸದುಪಯೋಗದ ಬಗ್ಗೆ ಮಾಹಿತಿ ನೀಡಿದರು. ಕನ್ನಡ ಮಾಧ್ಯಮಿಕ ಶಾಲೆಯ ಮುಖ್ಯೊಪಾಧ್ಯಾಯರಾದ ಎಸ್.ಎಮ್.ಬಡ್ಡುರ ಇವರು ವಿಷಯ ಶಿಕ್ಷಕರ ವೇದಿಕೆಯ ಸದುಪಯೋಗ ಬಗ್ಗೆ ಹೇಳಿದರು. ಈ ಕಾರ್ಯಕ್ರಮಕ್ಕೆ ವಿಜ್ಞಾನ ವಿಷಯ ಪರಿವೀಕ್ಷಕರಾದ ಐ.ಡಿ.ಹಿರೇಮಠ ಉಪಸ್ಥಿತರಿದ್ದರು, ಶಿಕ್ಷಣ ಸಂಯೋಜಕರಾದ ಗೀತಾ ತಿಗಡಿ, ಪರವಿಣ ನದಾಫ, ಬಿ.ಸಿ.ಮುದಕನಗೌಡರ, ಬಿ ಆರ್ ಪಿ ಗಳಾದ ಬಿ.ಬಿ.ನರಸನ್ನವರ, ರಿಜವಾನ್ ನಾವಗೇಕರ, ಸಿಆರ್‌ಪಿಗಳಾದ ಎಸ್ ಜಿ ಪಾಟೀಲ ಉಪಸ್ಥಿತರಿದ್ದರು.

ಶ್ರೀಮತಿ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರ ಸ್ವಾಗತ ಗೀತೆಯಿಂದ ಕಾರ್ಯಕ್ರಮವು ಆರಂಭವಾಯಿತು ಮುಖ್ಯೋಪಾಧ್ಯಾರಾದ ಎಮ್.ಕೆ.ಮಾದಾರ ಸ್ವಾಗತಿಸಿದರು ಹಾಗೂ ಸರಸ್ವತಿ ದೇಸಾಯಿ ಕಾರ್ಯಕ್ರಮವನ್ನು ನಿರೂಪಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button