Latest

*SSLC ಪರೀಕ್ಷಾ ಫಲಿತಾಂಶ ಪ್ರಕಟ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಪರಿಗಣಿಸಲಾಗಿರುವ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಸುದ್ದಿಗೋಷ್ಠಿ ನಡೆಸಲಾಗಿದ್ದು, ಈ ಬಾರಿ 83.89ರಷ್ಟು ಫಲಿತಾಂಶ ಬಂದಿದೆ. ಮಾರ್ಚ್ 31ರಿಂದ ಏಪ್ರಿಲ್ 15ರವರೆಗೆ ಪರೀಕ್ಷೆ ನಡೆದಿತ್ತು.

ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟು 7 ಲಕ್ಷದ 619 ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ. ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ.

ಬಾಲಕಿಯರು 3 ಲಕ್ಷದ 59 ಸಾವಿರದ 511 ವಿದ್ಯಾರ್ಥಿನಿಯರು, ಬಾಲಕರು ಶೇ.80.08ರಷ್ಟು ಫಲಿತಾಂಶ ಪಡೆದಿದ್ದಾರೆ.

ಚಿತ್ರದುರ್ಗ ಜಿಲ್ಲೆ ಶೇ.96.80 ರಷ್ಟು ಫಲಿತಾಂಶದೊಂದಿದೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಮಂಡ್ಯ ಶೇ.96.74ರಷ್ಟು ಫಲಿತಾಂಶದೊಂದಿಗೆ ಎರಡನೇ ಸ್ಥಾನ ಪಡೆದಿದೆ. ಹಾಸನ ಜಿಲ್ಲೆ ಶೇ.96.68ರಷ್ಟು ಫಲಿತಾಂಶದೊಂದಿಗೆ 3ನೇ ಹಾಗೂ ಯಾದಗಿರಿ ಜಿಲ್ಲೆ ಶೇ.75.49ರಷ್ಟು ಫಲಿತಾಂಶ ಪಡೆದು ಕೊನೇ ಸ್ಥಾನದಲ್ಲಿದೆ.

11 ಗಂಟೆ ಬಳಿಕ ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶ ಲಭ್ಯವಿರಲಿದೆ.

karresults.nic.in
kseab.karnataka.gov.in ನಲ್ಲಿ ಫಲಿತಾಂಶ ನೋಡಬಹುದು. ಫಲಿತಾಂಶಕ್ಕಾಗಿ ಅಭ್ಯರ್ಥಿಗಳು ನೊಂದಣಿ ಸಂಖ್ಯೆ ನಮೂದಿಸಬೇಕು.


https://pragati.taskdun.com/dasara-mahotsavabalarama-elephantdeath/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button