
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ನಡೆದ ಅದ್ಧೂರಿ ರಾಜ್ಯೋತ್ಸವದ ಮೆರವಣಿಗೆಯಲ್ಲಿ ನಿನ್ನೆ ರಾತ್ರಿ ಡಿಸಿ ಕಚೇರಿ ಸಮೀಪ ಆದಿತ್ಯ ಬೆಂಡಿಗೇರಿ ಎಂಬ ಯುವಕನಿಗೆ ಚಾಕುವಿನಿಂದ ಇರಿದಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಮಾರ್ಕೆಟ್ ಠಾಣೆ ಪೊಲೀಸರು ಅರುಣ ಕುರುಬರ ಮತ್ತು ಕಿರಣ ಕುರುಬರ ಎಂಬುವರನ್ನು ಬಂಧಿಸಿದ್ದಾರೆ.
ಗಾಯಗೊಂಡಿದ್ದ ಬೆಳಗಾವಿ ತಾಲೂಕು ಕೆಕೆ ಕೊಪ್ಪ ನಿವಾಸಿ ಆದಿತ್ಯನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಪಿಗಳಾದ ಅದೇ ಗ್ರಾಮದ ಸಹೋದರರಾದ ಅರುಣ ಕುರುಬರ ಮತ್ತು ಕಿರಣ ಕುರುಬರ ಅವರ ಸಹೋದರಿಯನ್ನು ಚುಡಾಯಿಸಿದ್ದಕ್ಕೆ ರಾಜ್ಯೋತ್ಸವ ಮೆರವಣಿಗೆಯಲ್ಲಿ ಆದಿತ್ಯ ಕೊಲೆಗೆ ಯತ್ನಿಸಿ ಚಾಕುವಿನಿಂದ ಇರಿದಿದ್ದರು.


