ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ನಾಲ್ವರು ಸೇರಿದಂತೆ 30 ಜನ ಪ್ರಾಣಕಳೆದುಕೊಂಡಿದ್ದಾರೆ. ಅವರ ಪೈಕಿ, ಅರುಣ್ ಕೊಪರ್ಡೆ ಹಾಗೂ ಮಹದೇವಿ ಬಾವನೂರ್ ಅವರ ಮೃತದೇಹ ಏರ್ ಲಿಫ್ಟ್ ಮೂಲಕ ಬೆಳಗಾವಿಗೆ ಆಗಮಿಸಿವೆ.
ಈ ಇಬ್ಬರ ಶವಗಳು ನಿಗದಿತ ಸಮಯಕ್ಕೆ ದೆಹಲಿಗೆ ತಲುಪಿರುವುದರಿಂದ, ಮಧ್ಯಾಹ್ನದ ವಿಮಾನದಲ್ಲಿ ದೆಹಲಿಯಿಂದ ನೇರವಾಗಿ ಬೆಳಗಾವಿಗೆ ತರಲಾಗಿದೆ. 3.20ಕ್ಕೆ ದೆಹಲಿಯಿಂದ ಹಾರಿದ ವಿಮಾನ, ಸಂಜೆ ವೇಳೆಗೆ ಬೆಳಗಾವಿಗೆ ತಲುಪಿದೆ.
ವಿವಾನ ನಿಲ್ದಾಣದಿಂದ ಇಬ್ಬರ ಮೃತದೇಹಗಳನ್ನು ನೇರವಾಗಿ ಬಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಜಿಲ್ಲಾಡಳಿತವು ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಸಂಸದ ಜಗದೀಶ್ ಶೆಟ್ಟರ್ ಹಾಗೂ ಸರ್ಕಾರದ ಪರವಾಗಿ ಡಿಸಿ ಮಹಮ್ಮದ್ ರೋಷನ್ ಅವರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ಇನ್ನು ಜ್ಯೋತಿ ಹತ್ತರವಾಟ ಹಾಗೂ ಅವರ ಪುತ್ರಿ ಮೇಘಾ ಅವರ ಶವಗಳು ತಡವಾಗಿ ದೆಹಲಿ ತಲುಪಿದ್ದರಿಂದ, ಅವು ಬರುವುದು ತಡವಾಗಿವೆ. ಸಂಜೆ 6 ಗಂಟೆಯ ವಿಮಾನದಲ್ಲಿ ದೆಹಲಿಯಿಂದ ಗೋವಾಗೆ ಶವಗಳನ್ನು ಕಳುಹಿಸಿಕೊಡಲಾಗಿದ್ದು, ತಾಯಿ, ಮಗಳ ಶವಗಳನ್ನು ಅಲ್ಲಿಂದ ಆಂಬುಲೆನ್ಸ್ ಮೂಲಕ ರಾತ್ರಿ 8.30 ಕ್ಕೆ ರಸ್ತೆ ಮಾರ್ಗವಾಗಿ ಬೆಳಗಾವಿಗೆ ತರಲಾಗುತ್ತವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ