Belagavi NewsBelgaum NewsKannada NewsKarnataka NewsLatest

*ಬೆಳಗಾವಿ-ಮುಂಬೈ ನಡುವೆ ಸ್ಟಾರ್ ಏರ್ ವಿಮಾನ ಹಾರಾಟಕ್ಕೆ ಡೇಟ್ ಫಿಕ್ಸ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕುಂದಾನಗರಿ ಬೆಳಗಾವಿಯಿಂದ ವಾಣಿಜ್ಯ ನಗರಿ ಮುಂಬೈ ನಡುವೆ ಸ್ಟಾರ್ ಏರ್ ವಿಮಾನ ಹಾರಾಟ ಆರಂಭಕ್ಕೆ ದಿನಗಣನೆ ಶುರುವಾಗಿದೆ.

ಅಕ್ಟೋಬರ್ 15ರಿಂದ ಪ್ರತಿದಿನ ಬೆಳಗಾವಿ ಹಾಗೂ ಮುಂಬೈ ನಡುವೆ ಸ್ಟಾರ್ ಏರ್ ತನ್ನ ಆಧುನಿಕ Embraer E175 ವಿಮಾನ ಮತ್ತು Embraer E145 ವಿಮಾನಗಳ ಹಾರಾಟ ನಡೆಸಲಿದೆ. ಉಭಯ ನಗರಗಳ ಸುಂದರ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಹಾಗೂ ಉದ್ಯಮಿಗಳಿಗೆ ಅನುಕೂಲವಾಗಲಿದೆ.

ಸ್ಟಾರ್ ಏರ್ ಬೆಳಗಾವಿ ಮತ್ತು ಮುಂಬೈ ನಡುವೆ ಬಿಸಿನೆಸ್ ಕ್ಲಾಸ್ ಸೇವೆಯನ್ನು ನೀಡುತ್ತದೆ. ಇದೇ ಮೊದಲ ಬಾರಿಗೆ ಎಂಬ್ರೇರ್ E175 ಅನ್ನು ಸೆಕ್ಟರ್‌ನಲ್ಲಿ ನಿರ್ವಹಿಸಲಾಗುತ್ತಿದೆ. ಈ ವಿಮಾನವು ಬೆಳಗಾವಿ ಮತ್ತು ಮುಂಬೈ ನಡುವೆ ಕೇವಲ 1 ಗಂಟೆ 15 ನಿಮಿಷಗಳಲ್ಲಿ ಕ್ರಮಿಸಲಿದೆ.

ವಿಮಾನ ಹಾರಾಟ ವೇಳಾಪಟ್ಟಿ:
ಬೆಳಗಾವಿ-ಮುಂಬೈ Embraer E175 :
Belagavi (IXG) to Mumbai (BOM) flight schedule
Sector Departure Arrival
Mumbai – Belagavi 12.15 pm -1.25 pm
Belagavi – Mumbai 1.55 pm -3.10 pm
Days of Operation: Sunday, Monday and Friday

ಬೆಳಗಾವಿ-ಮುಂಬೈ Embraer E145 :
Belagavi (IXG) to Mumbai (BOM) flight schedule
Sector Departure Arrival
Belagavi – Mumbai 8.50 am -9.55 am
Mumbai – Belagavi 12.50 pm -1.55 pm
Days of Operation: Wednesday, Thursday & Saturday

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button