ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಾಂಬ್ರಾ ಗ್ರಾಮದ ಶ್ರೀ ಬಸವೇಶ್ವರ ಮಂದಿರದ ಛಾವಣಿಗೆ ಕಾಂಕ್ರೀಟ್ ಹಾಕುವ ಕಾಮಗಾರಿ ಬುಧವಾರ ಜರುಗಿತು.
ಕಾರ್ಯಕ್ರಮದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಭಾಗವಹಿಸಿ ಗ್ರಾಮದಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳ ಕುರಿತು ಗ್ರಾಮಸ್ಥರೊಂದಿಗೆ ಸಮಾಲೋಚಿಸಿದರು.
ಕ್ಷೇತ್ರದಲ್ಲಿ ಕಳೆದ ಅವಧಿಯಲ್ಲಿ ರಸ್ತೆ, ನೀರು, ಸೇತುವೆಗಳು ಮತ್ತಿತರ ಮೂಲಸೌಲಭ್ಯಗಳಿಗೆ ಎಷ್ಟು ಆದ್ಯತೆ ನೀಡಲಾಗಿದೆಯೋ ಅಷ್ಟೇ ಪ್ರಾಮುಖ್ಯತೆಯನ್ನು ಶ್ರದ್ಧಾಕೇಂದ್ರಗಳ ಅಭಿವೃದ್ಧಿಗೂ ನೀಡಲಾಗಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿಯ ಗುರಿ ಹೊಂದಿದ್ದು ಜನತೆಯ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ವಿವಿಧ ಮಠಾಧೀಶರು, ಗ್ರಾಮದ ಹಿರಿಯರು, ಮೋಹನ ನಾಯ್ಕ, ಶಿವಾಜಿ ದೇಸಾಯಿ, ಸದಾಶಿವ ಪಾಟೀಲ, ಸೂರಪ್ಪ ದೇಸಾಯಿ, ನಾಗೇಶ ದೇಸಾಯಿ, ಈರಪ್ಪ ಸುಳೇಭಾವಿ, ಗ್ರಾಮ ಪಂಚಾಯಿತಿ ಸರ್ವಸದಸ್ಯರು, ಮಹಿಳೆಯರು ಹಾಗೂ ಮುಂತಾದವರು ಉಪಸ್ಥಿತರಿದ್ದರು.
ದಲಿತರ ಸ್ಮಶಾನ ಭೂಮಿಗಾಗಿ 3 ಲಕ್ಷ ವೈಯಕ್ತಿಕ ಸಹಾಯಧನ ನೀಡಿದ ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ
https://pragati.taskdun.com/mlc-channaraja-hattiholi-gave-3-lakhs-personal-subsidy-for-dalit-burial-ground/
*ಇಡಿಯಿಂದ ಮತ್ತೆ ಬುಲಾವ್; ಮಗಳಿಗೂ ಸಿಬಿಐ ನೊಟೀಸ್; ಬೇಸರ ತೋಡಿಕೊಂಡ ಡಿ.ಕೆ.ಶಿವಕುಮಾರ್*
https://pragati.taskdun.com/d-k-shivakumarpressmeetshivamoggaed/
*ಬ್ರಾಹ್ಮಣ ಸಮುದಾಯದ ಬಗ್ಗೆ ಹೇಳಿಕೆ ; ಗೋಕರ್ಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಗೆ ತರಾಟೆ*
https://pragati.taskdun.com/h-d-kumaraswamybrahmana-samudayaclarification/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ