Latest

ಶಾಲೆಗಳ ಆರಂಭ: ಹೊಸ ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಶಾಲೆ, ಕಾಲೇಜುಗಳ ಆರಂಭ ಸಂಬಂಧ ಶಿಕ್ಷಣ ಇಲಾಖೆ ಹೊಸ ಸುತ್ತೋಲೆ ಹೊರಡಿಸಿದೆ. ಇದರನ್ವಯ ಸೆಪ್ಟಂಬರ್ 30ರ ವರೆಗೂ ಮಕ್ಕಳನ್ನು ಶಾಲೆಗೆ ಕರೆಸುವಂತಿಲ್ಲ.

ಸೆಪ್ಟಂಬರ್ 21ರಿಂದ 9 ರಿಂದ 12ನೇ ತರಗತಿಯ ಮಕ್ಕಳನ್ನು ಪಾಲಕರ ಅನುಮತಿ ಪತ್ರದೊಂದಿಗೆ ಶಾಲೆಗೆ ಕರೆಸಬಹುದೆಂದು ಕೇಂದ್ರ ಸರಕಾರ ತಿಳಿಸಿತ್ತು. ಮಕ್ಕಳು ಯಾವುದೇ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಶಾಲೆಗೆ ಬರಬಹುದು ಎಂದು ತಿಳಿಸಲಾಗಿತ್ತು.

ಆದರೆ ಇದೀಗ ರಾಜ್ಯ ಸರಕಾರ ನೂತನ ಸುತ್ತೋಲೆ ಹೊರಡಿಸಿದೆ. ರಾಜ್ಯದಲ್ಲಿ ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲೆ, ಕಾಲೇಜಿಗೆ ಮಕ್ಕಳನ್ನು ಕರೆಸುವುದು ಕ್ಷೇಮಕರವಲ್ಲ. ಹಾಗಾಗಿ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಭೇಟಿ ನೀಡುವುದಕ್ಕೆ ಅನುಮತಿ ನೀಡದಿರಲು ತೀರ್ಮಾನಿಸಲಾಗಿದೆ ಎಂದು ತಿಳಿಸಲಾಗಿದೆ.

ಅವಲೋಕನೆಯ ನಂತರ ಮುಂದಿನ ತೀರ್ಮಾನವನ್ನು ತಿಳಿಸಲಾಗುವುದು. ಸೆಪ್ಟಂಬರ್ 30ರ ವರೆಗೂ ಈ ನಿಯಮ ಅನ್ವಯವಾಗಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button