ಪ್ರಗತಿವಾಹಿನಿ ಸುದ್ದಿ : ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿರುವುದರಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳು ಈ ಪಾಪರ್ ಸರ್ಕಾರಕ್ಕೆ ಸಾಲವೂ ನೀಡುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ವಾಗ್ದಾಳಿ ನಡೆಸಿದರು.
ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್‌ಗಳಿಂದ ಜನರಿಗೆ ಕಿರುಕುಳ, ಸಾವು ಪ್ರಕರಣಗಳ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲು ನೀಡುತ್ತಿಲ್ಲ. ಹೀಗಾಗಿ ಜನರು ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಸಿಎಂ ಸಿದ್ದರಾಮಯ್ಯ ಗೂಂಡಾ ಭಾಗ್ಯ ನೀಡಿದ್ದಾರೆ. ದಿವಾಳಿಯಾಗಿರುವ ಸರ್ಕಾರದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಮಿತಿಮೀರಿದೆ. ಆರನೇ ಭಾಗ್ಯವಾಗಿ ಗೂಂಡಾ ಭಾಗ್ಯ ಸಿದ್ದರಾಮಯ್ಯ ಅವರು ಸಿಎಂ ಆಗಿ ಬಂದ ಮೇಲೆ ನೀಡಿದ್ದು, ಈಗ ಗೂಂಡಾಗಳಿಗೂ ಕೆಲಸ ಕೊಟ್ಟಿದ್ದಾರೆ ಎಂದು ಕುಟುಕಿದರು.
ಇನ್ನು ಸಿದ್ದರಾಮಯ್ಯ ಅವರ ವಿರುದ್ಧದ ಮುಡಾ ಹಗರಣ ಆರೋಪ ಸಂಬಂಧ ಪ್ರಸ್ತಾಪಿಸಿದ ಅಶೋಕ್ , ಹಗರಣ ಕುರಿತಂತೆ ಲೋಕಾಯುಕ್ತ ಪೊಲೀಸರು ಪ್ರಾಮಾಣಿಕವಾಗಿ ತನಿಖೆ ಮಾಡಿಲ್ಲ. ಸಿಎಂ ಪರವಾಗಿ ಲೋಕಾಯುಕ್ತ ವರದಿ ಬರಲಿದೆ. ಆಗ ಅಧಿಕಾರಿಗಳು ಪ್ರಮೋಶನ್‌ಗಾಗಿ ಅವರ ಪರವಾಗಿಯೇ ರಿಪೋರ್ಟ್ ಕೊಡ್ತಾರೆ ಎಂದು ಆರೋಪ ಮಾಡಿದರು. ಅಲ್ಲದೇ ಮುಡಾ ವಿರುದ್ಧದ ಬಿಜೆಪಿಯ ಹೋರಾಟವು ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ