
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಈ ಹಿಂದೆ ಸಾರಿಗೆ ನೌಕರರು ರಾಜ್ಯಾದ್ಯಂತ ನಡೆಸಿದ್ದ ಪ್ರತಿಭಟನೆ ವೇಳೆ ವಜಾಗೊಂಡಿದ್ದ ಸಾರಿಗೆ ನೌಕರರನ್ನು ಮರು ನೇಮಕ ಮಾಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.
ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹಲವು ಸಾರಿಗೆ ನೌಕರರನ್ನು ವಜಾಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಸಾರಿಗೆ ನೌಕರರ ವಜಾ ಆದೇಶವನ್ನು ಸರ್ಕಾರ ಹಿಂಪಡೆದಿದೆ.
ಈ ಕುರಿತು ಸಾರಿಗೆ ಸಚಿವ ಶ್ರೀರಾಮುಲು ಮಾಹಿತಿ ನೀಡಿದ್ದು, ಪ್ರತಿಭಟನೆ ವೇಳೆ ವಜಾಗೊಂಡಿದ್ದ ಸಾರಿಗೆ ನೌಕರರನ್ನು ರೊವೋಕ್ ಮಾಡಲಾಗುವುದು. ಈ ಬಗ್ಗೆ ನಾಲ್ಕು ನಿಗಮದ ಎಂಡಿ ಜೊತೆ ಮಾತನಾಡಿದ್ದೇನೆ. ಪ್ರತಿಭಟನೆ ವೇಳೆ ವರ್ಗಾವಣೆ, ವಜಾ, ಡಿಸ್ಮಿಸ್ ಸೇರಿದಂತೆ ಸುಮಾರು 6 ಸಾವಿರ ಸಾರಿಗೆ ನೌರರನ್ನು ಸಸ್ಪೆಂಡ್ ಮಾಡಲಾಗಿತ್ತು. ಇದೀಗ ವಜಾ ಆದೇಶವನ್ನು ಹಿಂಪಡೆಯಲಾಗಿದ್ದು, ಚಾಲಕರು, ನಿರ್ವಾಹಕರು ಸೇರಿದಂತೆ ಎಲ್ಲಾ ಸಾರಿಗೆ ನೌಕರರನ್ನು ನಾಳೆಯೇ ಕರೆದು ಮಾತನಾಡುತ್ತೇನೆ ಎಂದರು.
ಕಠಿಣ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳುವ ಮೊದಲು ಸರ್ಕಾರದ ಜೊತೆ ಮಾತನಾಡಬೇಕು. ಇಲಾಖೆ ಸಿಬ್ಬಂದಿಗಳ ಜೊತೆ ನಾವಿದ್ದೇವೆ. ಸಂಬಳ ವಿಚಾರದಲ್ಲಾಗಲಿ, ವೇತನ ಬಿಡುಗಡೆ ವಿಚಾರವಾಗಲಿ ಯಾವುದೇ ಸಮಸ್ಯೆಗಳಿದ್ದರೂ ನೌಕರರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬೆಲೆ ಏರಿಕೆ ವಾಕ್ಸಮರ: ಭೂತದ ಬಾಯಲ್ಲಿ ಭಗವದ್ಗೀತೆ; ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ