Belagavi NewsBelgaum NewsKannada NewsKarnataka News

ಡಾ. ರಾಮಣ್ಣವರ್ ಅವರಿಗೆ ಶಾರೀರ ರತ್ನ ಪ್ರಶಸ್ತಿ ಪ್ರಧಾನ

ಪ್ರಗತಿವಾಹಿನಿ ಸುದ್ದಿ: ಬಾಗಲಕೋಟೆ ಪಟ್ಟಣದ ಎಮ್.ಆರ್.ಎನ್ (ನಿರಾಣಿ) ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಇತ್ತೀಚೆಗೆ  ನಡೆದ ರಾಷ್ಟ್ರ ಮಟ್ಟದ ಶರೀರ ಚಿಂತನ 2024 ಸಮ್ಮೇಳನದಲ್ಲಿ ಬೆಳಗಾವಿ  ಕೆಎಲ್‌ಇ ಶ್ರೀ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಶರೀರ ರಚನಾ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥ, ದೇಹದಾನ ಜಾಗೃತಿ ಗಾಗಿ ತಂದೆಯ ಮೃತ ದೇಹ ಛೇದಿಸಿ ವೈದ್ಯಕೀಯ ಕ್ಷೇತ್ರದ ದೇಹದಾನದ ರಾಯಭಾರಿ ಡಾ.ಮಹಾಂತೇಶ ರಾಮಣ್ಣವರ ಅವರ ಆಯುರ್ವೆದ ವೈದ್ಯಕೀಯ ಬೋಧನಾ ಸೇವೆ ಹಾಗೂ ಸಾರ್ವಜನಿಕರಲ್ಲಿ ದೇಹದಾನ ಹಾಗೂ ಅಂಗಾಂಗದಾನದ ಜಾಗೃತಿ ಅರಿವು ಮೂಡಿಸುವ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಶರೀರ ರತ್ನ 2024  ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ನಿರ್ದೇಶಕರು ಎಮ್.ಆರ್.ಎನ್ (ನಿರಾಣಿ) ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ಸಂಗಮೇಶ ನಿರಾಣಿ, ತೇಜಸ್ ಇಂಟರ್ನ್ಯಾಷನಲ್ ಎಜುಕೇಶನಲ್ ಸಂಸ್ಥೆಯ  ಅಧ್ಯಕ್ಷ ಮಾಧುರಿ ಮುಧೋಳ, ಡಾ.ಗಣೇಶ್ ಪುತ್ತೂರ, ಎಂಆರ್ ಎನ್  ಕಾಲೇಜಿನ ಪ್ರಾಂಶುಪಾಲ ಡಾ.ಪ್ರಹ್ಲಾದ ಗಂಗಾವತಿ, ಡಾ. ಶಿವಕುಮಾರ ಗಂಗಾಲ್, ಡಾ. ಮುರುಳಿಧರ್ ಬಡಿಗೇರ್ ಉಪಸ್ಥಿತರಿದ್ದರು.

ಡಾ.ರಾಮಣ್ಣವರ ಅವರಿಗೆ ಪ್ರಶಸ್ತಿ ಲಭಿಸಿರುವದಕ್ಕೆ ಕೆಎಲ್ಇ ಆಯುರ್ವೇದ  ಕಾಲೇಜಿನ ಪ್ರಾಚಾರ್ಯ ಡಾ. ಸುಹಾಸಕುಮಾರ ಶೆಟ್ಟಿ, ಶಿಕ್ಷಕರು, ವೈದ್ಯ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button