ಪರಮೇಶ್ವರ ಹೆಗಡೆ ಉತ್ತರ ಕರ್ನಾಟಕದ ಏಕೈಕ ಸದಸ್ಯ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಕೇಂದ್ರ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿ -2020ನ್ನು ಶಾಲೆ ಶಿಕ್ಷಣದಲ್ಲಿ ಅನುಷ್ಠಾನಗೊಳಿಸಲು ಕಾರ್ಯಪಡೆ ರಚಿಸಿ ಗುರುವಾರ ಸರಕಾರ ಆದೇಶ ಹೊರಡಿಸಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಹಲವಾರು ಬದಲಾವಣೆ ಮತ್ತು ಸುಧಾರಣೆ ತರಲು ಕೇಂದ್ರ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿ 20202 ಜಾರಿಗೊಳಿಸಿದೆ. ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕೆಂದು ಸರಕಾರ ತೀರ್ಮಾನಿಸಿದ್ದು, ಇದಕ್ಕಾಗಿ ಅನುಷ್ಠಾನ ಕಾರ್ಯಪಡೆಯನ್ನು ರಚಿಸಿ ಗುರುವಾರ ಆದೇಶ ಹೊರಡಿಸಿದೆ.
ಒಟ್ಟೂ 21 ಜನರು ಕಾರ್ಯಪಡೆಯಲ್ಲಿದ್ದು, ನಿವೃತ್ತ ಐಎಎಸ್ ಅಧಿಕಾರಿ ಮದನ ಗೋಪಾಲ ಕಾರ್ಯಪಡೆಯ ಅಧ್ಯಕ್ಷರು. ಬೆಳಗಾವಿಯ ಪರಮೇಶ್ವರ ಹೆಗಡೆ ಅವರಿಗೆ ಈ ಸಮಿತಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ. ಪರಮೇಶ್ವರ ಹೆಗಡೆ ಉತ್ತರ ಕರ್ನಾಟಕದ ಏಕೈಕ ಪ್ರತಿನಿಧಿಯಾಗಿದ್ದಾರೆ. ಪರಮೇಶ್ವರ ಹೆಗಡೆ ಸಧ್ಯ ವಿದ್ಯಾಭಾರತಿ ಕರ್ನಾಟಕದ ಅಧ್ಯಕ್ಷರೂ ಕೂಡ ಹೌದು.
ವಿಜಯಪುರದ ಸಿಂದಗಿ ತಾಲೂಕಿನ ಚಿದಾನಂದ ಪಾಟೀಲ ಅವರನ್ನೂ ಸಮಿತಿಯಲ್ಲಿ ಸೇರಿಸಲಾಗಿದೆ. ಆದರೆ ಅವರು ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಉಡುಪಿಯ ಮಹಾಬಲೇಶ್ವರ ರಾವ್ ಅವರೂ ಕಾರ್ಯಪಡೆಯಲ್ಲಿದ್ದು, ಇವರನ್ನು ಹೊರತುಪಡಿಸಿ ಎಲ್ಲರೂ ಬೆಂಗಳೂರಿನವರೇ ಆಗಿದ್ದಾರೆ.
ಕಾರ್ಯಪಡೆಯ ಸದಸ್ಯರು –
1. Preparation and finalization of draft implementation frame work
ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಕರಡು ಚೌಕಟ್ಟನ್ನು ತಯಾರಿಸುವುದು ಹಾಗೂ ನೀತಿಯ ಕರಡು ದಾಖಲೆಯನ್ನು ಪರಿಶೀಲಿಸಿ ಅಂತಿಮಗೊಳಿಸುವುದು
2. Working out the details of draft implementation frame work in consultation with stakeholders.
ಎಲ್ಲಾ ಭಾಗೀದಾರರರೊಂದಿಗೆ ಸಮಾಲೋಚಿಸಿ ಕರಡು ಶಿಕ್ಷಣ ನೀತಿಯ ಚೌಕಟ್ಟನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು.
3. Provide guidance in formulating SCFECCE and State Curriculum Framework 2020 for classes | to 12.
ಪೂರ್ವ ಪ್ರಾಥಮಿಕ ಹಂತದ ರಾಜ್ಯ ಪಠ್ಯವಸ್ತು ಚೌಕಟ್ಟು ಹಾಗೂ 1 ರಿಂದ 12ನೇ ತರಗತಿವರೆವಿಗೂ ರಾಜ್ಯ ಪಠ್ಯವಸ್ತು ಚೌಕಟ್ಟನ್ನು ತಯಾರಿಸುವಲ್ಲಿ ಮಾರ್ಗದರ್ಶನ ನೀಡುವುದು.
4. Presenting papers on the status of implementation, allotting tasks, monitoring them, identification of gaps and rebuilding necessary policies to bridge the gaps.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲು ಅಗತ್ಯವಿರುವ ಕಾರ್ಯಗಳನ್ನು ಹಂಚುವುದು, ಅವುಗಳ ಮೇಲುಸ್ತುವಾರಿ ಮಾಡುವುದು, ಅಂತರಗಳನ್ನು ಗುರ್ತಿಸಿ ಅವುಗಳನ್ನು ನಿವಾರಣೆಗೆ ಅಗತ್ಯವಿರುವ ನೀತಿಗಳನ್ನು ರೂಪಿಸುವುದು ಹಾಗೂ ಅನುಷ್ಠಾನದ ಪ್ರಗತಿ ಕುರಿತು ದಾಖಲೆಗಳನ್ನು ನಿರ್ವಹಿಸುವುದು.
5. Develop mechanisms to ensure inclusive and equitable education to achieve social justice and equality as recommended in NEP 2020.
ರಾಷ್ಟ್ರೀಯ ಶಿಕ್ಷಣ ನೀತಿಯ 2020ರ ಶಿಫಾರಸ್ಸಿನನ್ವಯ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಸಾಧಿಸಲು ಸಮನ್ವಯ ಮತ್ತು ಸಮಾನ ಶಿಕ್ಷಣದ ಕಾರ್ಯತಂತ್ರಗಳನ್ನು ರೂಪಿಸಿವುದು.
6. Provide assistance to prepare long term perspective plans for the implementation of NEP.
ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕಾಗಿ ದೀರ್ಪಾವಧಿ ಯೋಜನೆಗಳನ್ನು ಸಿದ್ಧಪಡಿಸಲು ಸಹಕರಿಸುವುದು.
7. Access and analyze the effects of NEP by 2030 and provide necessary guidance and provide remedial measures.
2030ರವರೆವಿಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಿಂದಾಗುವ ಪರಿಣಾಮಗಳನ್ನು ವಿಶ್ಲೇಷಿಸಿ ಅಗತ್ಯವಿರುವ ಮಾರ್ಗದರ್ಶನ ಮತ್ತು ಪರಿಹಾರಾತ್ಮಕ ಕ್ರಮಗಳನ್ನು ಸೂಚಿಸುವುದು.
8. ಅಧ್ಯಕ್ಷರ ಸೂಚನೆ ಮೇರೆಗೆ ಸದಸ್ಯ ಕಾರ್ಯದರ್ಶಿರವರು ಸಮಿತಿಯ ಸಭೆಗಳನ್ನು ಸದರಿ ಆಯೋಜಿಸುವರು.
9. ಅವಶ್ಯಕತೆಗುನುಗುಣವಾಗಿ ಸದರಿ ಕಾರ್ಯಪಡೆಯು ಸಭೆ ಸೇರುವುದು ಅಥವಾ ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ಸೇರಿ ಅನುಷ್ಠಾನ ಕಾರ್ಯಗಳನ್ನು ಪರಿಶೀಲಿಸಿ ಮಾರ್ಗದರ್ಶನ ನೀಡುವುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ