Latest

ಮಗನನ್ನು ಪುತ್ಥಳಿ ರೂಪದಲ್ಲಿ ನೋಡಲಾಗದು ಎಂದು ಕಣ್ಣೀರಿಟ್ಟ ತಂದೆ

ಪ್ರಗತಿವಾಹಿನಿ ಸುದ್ದಿ, ಚಂಡಿಗಡ: 28ರ ಹರೆಯದ ಮಗನನ್ನು ಪುತ್ಥಳಿ ರೂಪದಲ್ಲಿ ನೋಡಲು ಸಾಧ್ಯವಾಗದು ಎಂದು ಕಣ್ಣೀರಿಟ್ಟ ತಂದೆ ಮಗನ ಪುತ್ಥಳಿ ಅನಾವರಣದ ವೇಳೆ ಬಸವಳಿದಿದ್ದಾರೆ.

ಇತ್ತೀಚೆಗೆ ಹತ್ಯೆಗೀಡಾದ ಗಾಯಕ ಸಿಧು ಮೂಸೆವಾಲಾ ಅವರ 6.5 ಅಡಿ ಎತ್ತರದ ಪುತ್ಥಳಿಯೊಂದನ್ನು ಅವರ ತವರು ಗ್ರಾಮ ಮಾನ್ಸಾ ದಲ್ಲಿ ಸ್ಥಾಪಿಸಲಾಗಿದೆ. ಇದರ ಅನಾವರಣದ ವೇಳೆ ಕಣ್ಣೀರಿಟ್ಟ ಸಿಧು ತಂದೆ ಬಾಲಕೌರ್ ಸಿಂಗ್ “28ರ ಹರೆಯದ ನನ್ನ ಮಗನನ್ನು ಕಲ್ಲಿನಲ್ಲಿ ನೋಡಲು ಆಗುತ್ತಿಲ್ಲ. ನಾವು ನ್ಯಾಯಕ್ಕಾಗಿ ಕಾದಿದ್ದೇವೆ. ಮಗನ ಹತ್ಯೆಗೈದವರು ವಿದೇಶದಲ್ಲಿದ್ದರೂ ಅವರಿಗೆ ತಕ್ಕ ಶಿಕ್ಷೆಯಾಗಬೇಕು” ಎಂದು ಹೇಳುತ್ತ ಮಗನ ಪುತ್ಥಳಿಯೆದುರೇ ಕುಸಿದರು.

ಹಂತಕರ ಬಗ್ಗೆ ಪ್ರತಿಕ್ರಿಯಿಸಿದ ಅವರು “ನಾನೇ ಕೊಂದಿದ್ದೇನೆ ಎಂದು ಹೇಳಿಕೊಳ್ಳುವ ದುಷ್ಕರ್ಮಿಗಳಿಗೆ ರಕ್ಷಣೆ ಒದಗಿಸುವ ಅವಶ್ಯಕತೆ ಏನಿದೆ?” ಎಂದು ಪ್ರಶ್ನಿಸಿದರು. ಈ ವೇಳೆ ಮೂಸೆವಾಲಾ ತಾಯಿ ಕೂಡ ಮಗನ ಪುತ್ಥಳಿಯೆದುರು ಕಣ್ಣೀರಿಟ್ಟರು.

ನೆರಳಿದ ಪ್ರದೇಶವೊಂದರಲ್ಲಿ ಮೂಸೆವಾಲಾ ಅವರ ಪುತ್ಥಳಿ ನಿರ್ಮಿಸಿದ್ದು ಅದರ ಸುತ್ತ ಗಿಡಗಳನ್ನು ನೆಡುವಂತೆ ಮೂಸೆವಾಲಾ ಕುಟುಂಬದವರು ಸಂಬಂಧಿಗಳು, ಅಭಿಮಾನಿಗಳಲ್ಲಿ ಕೋರಿದ್ದಾರೆ.

Home add -Advt

ವಿಧಾನಪರಿಷತ್ ಉಪಚುನಾವಣೆಗೆ ಮುಹೂರ್ತ ಫಿಕ್ಸ್

Related Articles

Back to top button