ಪ್ರಗತಿವಾಹಿನಿ ಸುದ್ದಿ, ಮುಗಳಖೋಡ : ಸಮೀಪದ ಖನದಾಳ ಶ್ರೀ ಹುಲಕಾಂತೇಶ್ವರ ದೇವಸ್ಥಾನದಲ್ಲಿ ಮಂಗಳವಾರ ತಡರಾತ್ರಿ 11.30 ರಿಂದ 12 ಗಂಟೆಯ ಮಧ್ಯೆ ಕೆಲ ದುಷ್ಕರ್ಮಿಗಳು ಕೀಲಿ ಮುರಿದು ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ ಘಟನೆ ನಡೆದಿದೆ.
ಇಂದು ಬೆಳಿಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ದೌಡಾಯಿಸಿದ ಹಾರೂಗೇರಿ ಪೋಲಿಸ್ ಅಧಿಕಾರಿ ರಾಘವೇಂದ್ರ ಖೋತ ಹಾಗೂ ಕ್ರೈಂ ಪಿಎಸೈ ಆರ್ ಆರ್ ಕಂಗನ್ನೋಳ್ಳಿ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ .
ದೇವಸ್ಥಾನದಲ್ಲಿ ಕಳ್ಳತನ ನಡೆದಿರುವ ಘಟನೆ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಭಕ್ತಸಮೂಹ ದೌಡಾಯಿಸಿದ್ದು ಕಳ್ಳರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ