Kannada NewsKarnataka NewsNational

*ಗಣಪತಿ ವಿಸರ್ಜನೆ ವೇಳೆ ಕಲ್ಲು ತೂರಾಟ*

ಪ್ರಗತಿವಾಹಿನಿ ಸುದ್ದಿ: ಗಣೇಶ ಹಬ್ಬದಂದು ಅನೇಕ ಅವಾಂತರಗಳು, ಸಾವು ನೋವುಗಳು ಸಂಭವಿಸಿದೆ. ಅದೇ ರೀತಿ ಗಣಪತಿ ವಿಸರ್ಜನಾಪೂರ್ವ ಮೆರವಣಿಗೆ ವೇಳೆ ಗಲಾಟೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರೆಬಿಳಚಿ ಗ್ರಾಮದಲ್ಲಿ ನಡೆದಿದೆ.‌

ಅರೆಬಿಳಚಿ ಗ್ರಾಮದ ನಟೇಶ್ ಕಾಲೋನಿಯ ಆದಿ ಕರ್ನಾಟಕದವರ ಗಣಪತಿ ಹಾಗೂ ಬೋವಿ ಜನಾಂಗದ ಸರ್ಕಲ್ ಗಣಪತಿ ಸಮಿತಿಯವರು ನಿನ್ನೆ ಗಣಪತಿ ವಿಸರ್ಜನೆ ಹಮ್ಮಿಕೊಂಡಿದ್ದರು. ಇವರಿಬ್ಬರು ಒಂದೇ ಡೊಳ್ಳು ಬಾರಿಸುವವರಿಗೆ ಮುಂಗಡ ಹಣ ನೀಡಿದ್ದರು. ಒಂದೇ ಗಣಪತಿ ಬಳಿ ಡೊಳ್ಳು ಬಾರಿಸುತ್ತಿದ್ದರಿಂದ ಪ್ರಶ್ನಿಸಿದ ಮುಂಗಡ ಹಣ ನೀಡಿದ ಸಮಿತಿ ಯುವಕರು, ಈ ವೇಳೆ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಬಳಿಕ ಕಲ್ಲು ತೂರಾಟವು ನಡೆದಿದೆ. 

ಈ ವೇಳೆ ಜಗಳ ಬಿಡಿಸಲು ಮುಂದಾದ ಪೊಲೀಸರಾದ ನಾಗರಾಜ್ ಹಾಗೂ ವಿಶ್ವ ಎಂಬುವವರ ಮೆಲೆ ಹಲ್ಲೆಯಾಗಿದ್ದು, ಸ್ಥಳಕ್ಕೆ ಎ ಎಸ್ ಪಿ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಇನ್ನು ಅರ್ಜುನ್ ಎಂಬ ಯುವಕನ ಮೇಲೆ ಹಲ್ಲೆಯಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದಲ್ಲಿ ಕೆಲಕಾಲ ಬಿಗುವಿನ ವಾತಾವರಣವಿದ್ದು, ಈ ಹಿನ್ನೆಲೆಯಲ್ಲಿ, ಗ್ರಾಮದಲ್ಲಿ ಕೆಎಸ್ ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಗಲಾಟೆ ವೇಳೆ ಇಬ್ಬರು ಪೊಲೀಸರ ಮೇಲೂ ಹಲ್ಲೆಯಾಗಿದೆ. ಗಲಾಟೆ ಸಂಬಂಧ 15-20 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button