
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ಸಹಕಾರ ಸಂಘದ ಚುನಾವಣೆಯಲ್ಲಿ ಕತ್ತಿ ಬಣ ಎಲ್ಲಾ 15 ಸ್ಥಾನಗಳನ್ನು ಗೆದ್ದುಕೊಂಡರೆ ಜಾರಕಿಹೊಳಿ ಸಹೋದರರ ಬಣ ಸೋಲೊಪ್ಪಿದೆ. ಈ ನಡುವೆ
ಗೆಲುವಿನ ಸಂಭ್ರಮದಲ್ಲಿದ್ದ ಕತ್ತಿ ಬೆಂಬಲಿಗರು ಅತಿರೇಕವಾಗಿ ವರ್ತಿಸಿ ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರ ಕಾರಿನ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ ಎನ್ನಲಾಗಿದೆ.
ಸತೀಶ್ ಜಾರಕಿಹೊಳಿ ಬೆಂಬಗಲಿಗರಿದ್ದ ಕಾರಿಗೆ ಮತ್ತೊಂದು ಗುಂಪಿನವರು ಕೈಯಿಂದ ಗುದ್ದಿ ಕಲ್ಲುತೂರಾಟ ನಡೆಸಿದ್ದಾರೆ. ತಕ್ಷಣ ಅಲ್ಲಿದ್ದ ಪೊಲೀಸರು ಗುಂಪನ್ನು ಚದುರಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಮಾಜಿ ಸಂಸದ ರಮೇಶ್ ಕತ್ತಿ ಅವರ ಬಣ ಗೆದ್ದು ಬೀಗಿದೆ. ರಮೇಶ ಕತ್ತಿ ಬಣ ಎಲ್ಲಾ 15 ಸ್ಥಾನ ಗೆದ್ದುಕೊಂಡಿದೆ. ಆದರೆ ಜಾರಕಿಹೊಳಿ ಸಹೋದರರಿಗೆ ಈ ಫಲಿತಾಂಶ ಶಾಕ್ ನೀಡಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಈ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು ಆದರೆ ಸೋಲು ಕಂಡಿದ್ದಾರೆ.