Election NewsNational

*ಪ್ರಚಾರದ ವೇಳೆ ಎನ್‌ಸಿಪಿ-ಎಸ್‌ಸಿಪಿ ನಾಯಕನ ಮೇಲೆ ಕಲ್ಲು ತೂರಾಟ*

ಪ್ರಗತಿವಾಹಿನಿ ಸುದ್ದಿ: ಎನ್‌ಸಿಪಿ-ಎಸ್‌ಸಿಪಿ ನಾಯಕ ಅನಿಲ್ ದೇಶ್‌ಮುಖ್ ಅವರ ಕಾರಿನ ಮೇಲೆ ಕೆಲ ದುಷ್ಕರ್ಮಿಗಳು ರಾತ್ರಿ ಕಲ್ಲು ತೂರಾಟ ನಡೆದಿದ್ದು, ದೇಶ್‌ಮುಖ್ ತಲೆಗೆ ಗಂಭೀರವಾಗಿ ಗಾಯವಾಗಿದೆ.

ದೇಶ್‌ಮುಖ್ ಅವರು ನಿನ್ನೆ ರಾತ್ರಿಯವರೆಗೂ ನಾಗುರ ಜಿಲ್ಲೆಯ ನಾರ್ಖೇಡ್ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಕಟೋಲ್‌ಗೆ ಹಿಂತಿರುಗುತ್ತಿದ್ದಾಗ ಇವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕಟೋಲ್ ವಿಧಾನಸಭಾ ಕ್ಷೇತ್ರದ ಕಟೋಲ್ ಜಲಖೇಡ ರಸ್ತೆಯಲ್ಲಿ ಕೆಲ ದುಷ್ಕರ್ಮಿಗಳು ತಮ್ಮ ಕಾರಿಗೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಅನಿಲ್ ದೇಶ್‌ಮುಖ್ ಅವರೇ ಸ್ವತಃ ಹೇಳಿದ್ದಾರೆ. ದೇಶ್‌ಮುಖ್ ಅವರ ತಲೆಗೆ ಪಟ್ಟಾಗಿದ್ದರಿಂದ ಸ್ಥಳೀಯ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. 

ಇನ್ನು ಈ ಬಗ್ಗೆ ಎನ್ ಸಿ ಪಿ ತನ್ನ ಸೋಶಿಯಲ್ ಮೀಡಿಯಾ ಎಕ್ಸ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿಕೊಂಡಿದ್ದು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಂಪೂರ್ಣ ವೈಫಲ್ಯ ಕ್ಕೆ ಉದಾಹರಣೆಯಾಗಿದೆ ಎಂದು ಬರೆದುಕೊಂಡಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button