
ಪ್ರಗತಿವಾಹಿನಿ ಸುದ್ದಿ: ಓಂ ಶಕ್ತಿ ಮಾಲಾಧಾರಿಗಳಿಂದ ದೇವಿಯ ತೇರು ಎಳೆಯುತ್ತಿರುವ ಮೆರವಣಿಗೆ ಸಂದರ್ಭದಲ್ಲಿಯೇ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಇದೇ ವೇಳೆ ಮಾಲೆ ಧರಿಸಿದ್ದ ಮಗುವೊಂದು ಕಲ್ಲೇಟಿನಿಂದ ಗಾಯಗೊಂಡಿರುವ ಬಗ್ಗೆಯೂ ವರದಿಯಾಗಿದೆ. ಬೆಂಗಳೂರಿನ ಜೆಜೆಆರ್ ನಗರದ ವಿಎಸ್ ಗಾರ್ಡನ್‌ನ ಓಂ ಶಕ್ತಿ ದೇವಸ್ಥಾನದ ಸಮೀಪ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಭಕ್ತಾದಿಗಳು ಈ ಘಟನೆಯಿಂದ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಲ್ಲು ತೂರಾಟದಿಂದ ರೊಚ್ಚಿಗೆದ್ದ ಓಂ ಶಕ್ತಿ ಭಕ್ತಾದಿಗಳು ಜೆಜೆ ಆರ್ ನಗರ ಠಾಣೆಯ ಮುಂದೆ ಜಮಾವಣೆಗೊಂಡು ಕಿಡಿಗೇಡಿಗಳನ್ನು ಕೂಡಲೇ ಅರೆಸ್ಟ್ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಘಟನಾ ಸ್ಥಳ ಹಾಗೂ ಠಾಣೆಯ ಎದುರು ಬಿಗಿ ಪೊಲೀಸ್ ಬಂದೋ ಬಸ್ತ್ ನಿಯೋಜಿಸಲಾಗಿದೆ.


