12 ದಿನಗಳ ಕಾಲ ನಿರಂತರ ವೃತ್ತಾಕಾರದಲ್ಲಿ ಚಲಿಸಿದ ಕುರಿಗಳು; ವಿಜ್ಞಾನಿಗಳಿಗೂ ಸವಾಲಾದ ನಿಗೂಡ ವರ್ತನೆ
ಪ್ರಗತಿವಾಹಿನಿ ಸುದ್ದಿ; ಬೀಜಿಂಗ್: ಉತ್ತರ ಚೀನಾದ ಮಂಗೋಲಿಯಾ ಪ್ರಾಂತ್ಯದಲ್ಲಿ ನೂರಾರು ಕುರಿಗಳ ಗುಂಪು ನಿರಂತರ 12 ದಿನಗಳ ಕಾಲ ವೃತ್ತಾಕಾರದಲ್ಲಿ ಚಲಿಸುತ್ತಾ ನಿಗೂಡ ವರ್ತನೆ ತೋರಿವೆ.
ಕುರಿಗಳ ಈ ವಿಚಿತ್ರ ನಡವಳಿಕೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.
ಪ್ರದಕ್ಷಿಣಾಕಾರದಲ್ಲಿ ಕುರಿಗಳ ಗುಂಪು ಚಲಿಸುತ್ತಲೇ ಇದ್ದವು. ನಿರಂತರ 12 ದಿನಗಳ ಕಾಲ ನಡೆಯುತ್ತಿದ್ದರೂ ಎಲ್ಲ ಕುರಿಗಳೂ ಆರೋಗ್ಯದಿಂದಲೇ ಇವೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಅಲ್ಲದೇ ಕುರಿಗಳು ಚಲಿಸುತ್ತಿರುವ ವಿಡಿಯೋವನ್ನು ಚೀನಾದ ಪೀಪಲ್ಸ್ ಡೇಲಿ ಟ್ವೀಟ್ ಮಾಡಿದೆ.
ಕುರಿಗಳ ಈ ವಿಚಿತ್ರ ನಡುವಳಿಕೆಯ ಲಾಜಿಕ್ ಸಧ್ಯಕ್ಕಂತೂ ವಿಜ್ಞಾನಿಗಳಿಗೆ ಅರ್ಥವಾಗಿಲ್ಲ ಎನ್ನಲಾಗುತ್ತಿದೆ.
ಒಂದಿಷ್ಟು ಕುರಿಗಳಿದ್ದ ಗುಂಪು ನಡೆಯುತ್ತಲೇ ಇದ್ದರೆ, ಕೆಲವು ಕುರಿಗಳು ನಡುನಡುವೆ ನಿಂತು ಮತ್ತೆ ಮುಂದಕ್ಕೆ ಚಲಿಸುತ್ತಿದ್ದವು. ವಿಚಿತ್ರವೆಂದರೆ ಇನ್ನೂ ನೂರಾರು ಕುರಿಗಳ ಮಂದೆ, ಈ ಕುರಿಗಳ ವೃತ್ತಾಕಾರದ ಚಲನೆಯನ್ನು ವೀಕ್ಷಿಸುತ್ತಿದ್ದವು ಎಂದು ವರದಿಯಾಗಿದೆ.
https://pragati.taskdun.com/veteran-actresstabssumdied/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ